
ತೆಲಂಗಾಣದ ನಾಗರ್ ಕರ್ನೂಲ್ ಬಳಿ ಸುರಂಗ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ತಿಂಗಳ ಬಳಿಕ ಮತ್ತೋರ್ವ ಕಾರ್ಮಿಕನ ಶವ ಪತ್ತೆಯಾಗಿದೆ.
ಫೆ.22ರಂದು ನಾಗರ್ ಕರ್ನೂಲ್ ಬಳಿ ಶ್ರೀಶೈಲಂ ಎಡದಂಡೆ ಕಾಲುವೆ ಸುರಂಗ ನಿರ್ಮಾಣ ಕಾಮಗಾರಿ ವೇಳೆ ದುರಂತ ಸಂಭವಿಸಿತ್ತು. ಸುರಂಗದ ಅವಶೇಷಗಳಡಿ 8 ಕಾರ್ಮಿಕರು ಸಿಲುಕಿಕೊಂಡಿದ್ದರು. ಈ ಹಿಂದೆ ಓರ್ವ ಕಾರ್ಮಿಕನ ಶವ ಪತ್ತೆಯಾಗಿತ್ತು. ಇಂದು ಮತ್ತೋರ್ವ ಕಾರ್ಮಿಕನ ಶವ ಪತ್ತೆಯಾಗಿದೆ.
ಗುರುಪ್ರೀತ್ ಸಿಂಗ್ ಎಂಬ ಕಾರ್ಮಿಕನ ಮೃತದೇಹವನ್ನು ರಕ್ಷಣಾ ತಂಡಗಳು ಮಾ.9ರಂದು ಹೊರತೆಗೆದಿದ್ದರು. ಇದೀಗ ಮತ್ತೋರ್ವ ಕಾರ್ಮಿಕನ ಶವ ಹೊರತೆಗೆಯಲಾಗಿದೆ. ಇನ್ನೂ 6 ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 25 ಏಜೆನ್ಸಿಗಳು, 700 ಸಿಬ್ಬಂದಿಗಳಿಂದ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ಮುಂದುವರೆದಿದೆ. ಸುರಂಗದ 14 ಕಿಮೀ ದೂರದಲ್ಲಿ ಸುರಂಗ ಕುಸಿದಿರುವುದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದೆ. ದುರಂತ ನಡೆದಿರುವ 30 ಮೀಟರ್ ಅಪಾಯಕಾರಿ ವಲಯ ಎಂದು ಗುರುತಿಸಲಾಗಿದೆ.