
ಹೈದರಾಬಾದ್: ತೆಲಂಗಾನದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ ಪ್ರಕರಣಕ್ಕೆ ಸಂಬಂದಿಸಿದಂತೆ ನಾಪತ್ತೆಯಾಗಿರುವ 8 ಜನರಲ್ಲಿ ನಾಲ್ವರು ಪತ್ತೆಯಾಗಿದ್ದಾರೆ.
ತೆಲಂಗಾಣದ ನಾಗಕರ್ನೂಲ್ ಬಳಿ ಶ್ರೀಶೈಲಂ ಎಡದಂಡೆ ಕಾಲುವೆ ಸುರಂಗದೊಳಗೆ ಸಿಲುಕಿದ್ದ 8 ಜನರಲ್ಲಿ ನಾಲ್ವರನ್ನು ಪತ್ತೆ ಹಚ್ಚಲಾಗಿದೆ. ತೆಲಂಗಾಣ ಸಿಎಂ ರೇವಣಂತ್ ರೆಡ್ದಿ ಇಂದು ಸಂಜೆ ಸುರಂಗ ಕುಸಿತ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ರಕ್ಷಣಾ ಕಾರ್ಯಾಚರಣೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಲಿದ್ದಾರೆ.
ಸಚಿವ ಜೂಪಲ್ಲಿ ಕೃಷ್ಣರಾವ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸುರಂಗದಲ್ಲಿ ಸಿಲುಕಿರ 8 ಜನರಲ್ಲಿ ನಾಲ್ವರು ಎಲ್ಲಿದ್ದಾರೆ ಎಂಬುದನ್ನು ರಕ್ಷಣಾ ತಂದ ಪತ್ತೆ ಮಾಡಿದೆ. ಸುರಂಗ ಕೊರೆಯುವ ಯಂತ್ರದಡಿ ನಾಲ್ವರು ಸಿಲುಕಿದ್ದಾರೆ ಎನ್ನಲಾಗಿದೆ. ಅವರನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ. ಬದುಕಿರುವ ಸಾಧ್ಯತೆ ಶೇ.1ರಷ್ಟಿದೆ ಎಂದಿದ್ದಾರೆ.
ಫೆ.22ರಂದು ಸುರಂಗ ಕುಸಿತಗೊಂಡಿತ್ತು. ಸುರಂಗದಲ್ಲಿ ಸಿಲುಕಿದವರನ್ನು ಉತ್ತರ ಪ್ರದೇಶ ಮೂಲದ ಮನೋಜ್ ಕುಮಾರ್, ಶ್ರೀನಿವಾಸ್, ಜಮ್ಮುಕಾಶ್ಮೀರದ ಸನ್ನಿ ಸಿಂಗ್, ಪಂಜಾಬ್ ನ ಗುರುಪ್ರೀತ್ ಸಿಂಗ್, ಜಾರ್ಖಂಡ್ ನ ಸಂದೀಪ್ ಸಾಹು, ಜೆಗ್ಸಾ ಕೇಸ್, ಸಂತೋಷ್ ಸಾಹು, ಅನುಜ್ ಸಾಹು ಎಂದು ಗುರುತಿಸಲಾಗಿದೆ.