
ನೈನಪಾಕ ಗ್ರಾಮದಲ್ಲಿ ಹೀಗೆ ಪ್ರವಾಹದ ಮಧ್ಯೆ ಸಿಲುಕಿ ಪ್ರಾಣಾಪಾಯದಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಜೆಸಿಬಿ ಏರಿ ನಿಂತಿದ್ದ ಆರು ಮಂದಿಯನ್ನು ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಮೂಲಕ ಯೋಧರು ಸುರಕ್ಷಿತವಾಗಿ ಕರೆತಂದಿದ್ದಾರೆ.
ತೆಲಂಗಾಣದ ಸ್ಥಳೀಯಾಡಳಿತ ನೀಡಿದ ಮಾಹಿತಿ ಮೇರೆಗೆ ತಕ್ಷಣವೇ ಧಾವಿಸಿದ ಭಾರತೀಯ ವಾಯು ಸೇನೆ ಸಿಬ್ಬಂದಿ, ಆರು ಮಂದಿಯನ್ನು ರಕ್ಷಿಸಿದ್ದು, ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.