ತೆಲಂಗಾಣದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಹೊಡೆದು ಕೊಂದು ಆಕೆಯ ಶವಕ್ಕೆ ಲೈಂಗಿಕ ಕಿರುಕುಳ ನೀಡಿದ 25 ವರ್ಷದ ಯುವಕನನ್ನು ಬಂಧಿಸಲಾಗಿದೆ. ಹೈದರಾಬಾದ್ ನಿಂದ 50 ಕಿಮೀ ದೂರದಲ್ಲಿರುವ ಚೌಟುಪ್ಪಲ್ ಪಟ್ಟಣದಲ್ಲಿ ಈ ಭೀಕರ ಘಟನೆ ನಡೆದಿದೆ.
ಕಟ್ಟಡ ನಿರ್ಮಾಣ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ, ತನ್ನ ಮನೆಯ ಸಮೀಪವಿರುವ ಗೋಡೌನ್ ನಲ್ಲಿ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದ 24 ವರ್ಷದ ಮಹಿಳೆಯನ್ನು ಹಿಂಬಾಲಿಸುತ್ತಿದ್ದ.
ಪತಿ ಹತ್ತಿರದ ಕಾಲೇಜಿನಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದಾಗ ಮಹಿಳೆ ಬಹಳ ಗಂಟೆಗಳ ಕಾಲ ಒಬ್ಬಂಟಿಯಾಗಿ ಇರುವುದನ್ನು ಆರೋಪಿ ಗಮನಿಸಿದ್ದ.
ಮೇ 9 ರಂದು ಗೋಡೌನ್ ಗೆ ನುಗ್ಗಿ ಮಹಿಳೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ನಂತರ ಅತ್ಯಾಚಾರವೆಸಗಿದ್ದಾನೆ. ಆದರೆ ಒಂದು ಗಂಟೆಯೊಳಗೆ ಮಹಿಳೆಯನ್ನು ಕೊಲೆ ಮಾಡಿದ್ದಾನೆ.
ಚೌಟುಪ್ಪಲ್ ಸಹಾಯಕ ಪೊಲೀಸ್ ಕಮಿಷನರ್(ಎಸಿಪಿ) ಉದಯ್ ರೆಡ್ಡಿ ಪ್ರಕಾರ, ಆರೋಪಿಯು ಮಹಿಳೆಯ ತಲೆಯನ್ನು ಮೊಂಡಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿ ಶವದ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ.
ಕೃತ್ಯದ ನಂತರ, ಮೃತಳ ಚಿನ್ನಾಭರಣಗಳನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾನೆ. ಸಂತ್ರಸ್ತೆಯ ಪತಿ ನೀಡಿದ ಪೊಲೀಸ್ ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ, ಕೊಲೆ ಮತ್ತು ಇತರ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ತನಿಖೆ ನಡೆಸಿದ್ದು, ಅಪರಾಧ ನಡೆದ ಸ್ಥಳದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಮಲ್ಕಾಪುರ ಗ್ರಾಮದಿಂದ ಮೇ 11 ರಂದು ಆರೋಪಿಯನ್ನು ಬಂಧಿಸಿದರು. ಪೊಲೀಸರು ಆತನ ಬಳಿಯಿದ್ದ ಕದ್ದ ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.