ನಲ್ಗೊಂಡ: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ತನಗಾಗಿ ಮಟನ್ ಕರಿ ಮಾಡಲಿಲ್ಲವೆಂದು 100 ಗೆ ಡಯಲ್ ಮಾಡಿ ಪತ್ನಿ ವಿರುದ್ಧ ದೂರು ನೀಡಿದ್ದು, ಆತನನ್ನು ಬಂಧಿಸಲಾಗಿದೆ.
ನವೀನ್ ಬಂಧಿತ ಆರೋಪಿ. ತನ್ನ ಫೋನ್ ತೆಗೆದುಕೊಂಡು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ, ತನಗೆ ಮಟನ್ ಕರಿ ಬೇಯಿಸದ ಹೆಂಡತಿಯ ವಿರುದ್ಧ ದೂರು ನೀಡಿದ್ದಾನೆ. ಆರಂಭದಲ್ಲಿ, ಡಯಲ್ 100 ಆಪರೇಟರ್ಗಳು ಇದನ್ನು ತಮಾಷೆ ಎಂದು ಪರಿಗಣಿಸಿ ಸುಲಭವಾಗಿ ತೆಗೆದುಕೊಂಡರು. ಆದರೆ ಮದ್ಯದ ಅಮಲಿನಲ್ಲಿದ್ದ ನವೀನ್ ನಿಯಂತ್ರಣ ಕೊಠಡಿಗೆ ಆರು ಬಾರಿ ಕರೆ ಮಾಡಿದಾಗ, ಈ ವ್ಯಕ್ತಿಗೆ ತಕ್ಕ ಪಾಠ ಕಲಿಸಬೇಕು ಎಂದು ಶುಕ್ರವಾರ ರಾತ್ರಿ ತಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ನವೀನ್ ಗೆ ತಾನು ಏನು ಮಾಡಿದ್ದೇನೆಂದು ತಿಳಿದಿರಲಿಲ್ಲ, ಆದರೆ, ಶನಿವಾರ ಬೆಳಿಗ್ಗೆ, ಕಣಗಲ್ ಮಂಡಲದ ಚೇರ್ಲಾ ಗೌರಾರಂ ಗ್ರಾಮದ ಅವರ ಮನೆಗೆ ಬಂದ ಪೊಲೀಸರು ನವೀನ್ ನನ್ನು ವಶಕ್ಕೆ ತೆಗೆದುಕೊಂಡರು. ಅವರು ಭಾರತೀಯ ದಂಡ ಸಂಹಿತೆಯ(IPC) ಸೆಕ್ಷನ್ 290 ಮತ್ತು 510 ರ ಅಡಿಯಲ್ಲಿ ಕ್ರಮವಾಗಿ ಸಾರ್ವಜನಿಕ ಉಪದ್ರವ ಮತ್ತು ಸಾರ್ವಜನಿಕ ಸ್ಥಳದಲ್ಲಿ ಕುಡುಕ ವ್ಯಕ್ತಿಯಿಂದ ಅನುಚಿತವಾಗಿ ವರ್ತಿಸುವ ಆರೋಪಗಳಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಸೆಕ್ಷನ್ 290 ದಂಡವನ್ನು ವಿಧಿಸಿದರೆ, ಸೆಕ್ಷನ್ 510 ಒಂದು ದಿನದ ಜೈಲು ಶಿಕ್ಷೆ ಮತ್ತು / ಅಥವಾ ದಂಡವನ್ನು ಒಳಗೊಳ್ಳುತ್ತದೆ.
ನವೀನ್, ಶುಕ್ರವಾರ ರಾತ್ರಿ ಮದ್ಯ ಸೇವಿಸಿ ಕುರಿಮರಿಯೊಂದಿಗೆ ಮನೆಗೆ ಮರಳಿದ್ದ. ಅದನ್ನು ಕತ್ತರಿಸಿ ಬೇಯಿಸಲು ತನ್ನ ಹೆಂಡತಿಗೆ ಆದೇಶಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮನನೊಂದಿದ್ದ ಅವನ ಹೆಂಡತಿ ಅಡುಗೆ ಮಾಡಲು ನಿರಾಕರಿಸಿದಳು, ಬಳಿಕ ನವೀನ್ ಪೊಲೀಸರಿಗೆ ಕರೆ ಮಾಡಿ ಕಾಟ ಕೊಟ್ಟಿದ್ದಾನೆ. ಗಸ್ತು ಪೊಲೀಸರು ಶುಕ್ರವಾರ ರಾತ್ರಿ ಅವರ ಮನೆಗೆ ಹೋದಾಗ ಆತ ಸಂಪೂರ್ಣವಾಗಿ ಮದ್ಯಪಾನ ಮಾಡಿರುವುದು ಕಂಡುಬಂದಿದೆ. ಅವರು ಸದ್ಯಕ್ಕೆ ಅವರನ್ನು ನಿರ್ಲಕ್ಷಿಸಲು ನಿರ್ಧರಿಸಿದರು, ಆದರೆ ಶನಿವಾರ ಬೆಳಿಗ್ಗೆ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಹಿಂತಿರುಗಿದರು.
ಸಂಕಷ್ಟದಲ್ಲಿರುವ ಅಥವಾ ತುರ್ತು ಸಂದರ್ಭಗಳಲ್ಲಿ ಜನರಿಗೆ ಸಹಾಯ ಮಾಡಲು ಡಯಲ್ 100 ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳದಂತೆ ಕಣಗಲ್ ಎಸ್ಐ ನಾಗೇಶ್ ಎಚ್ಚರಿಸಿದರು. ಅಪ್ರಸ್ತುತ ವಿಷಯಕ್ಕೆ 100ಕ್ಕೆ ಕರೆ ಮಾಡಿ ಪೊಲೀಸರ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದಕ್ಕಾಗಿ ನವೀನ್ ವಿರುದ್ಧ ಪ್ರಸ್ತುತ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ವಿವರಿಸಿದರು.