
ತೆಲಂಗಾಣದ ಕರೀಂನಾಗಾ ಜಿಲ್ಲೆಯಲ್ಲಿ ಭಯಾನಕ ರಸ್ತೆ ಅಪಘಾತ ನಡೆದಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಒಬ್ಬ ಬೈಕರ್ ಹಿಂದೆ ಮುಂದೆ ನೋಡದೆ ಯೂಟರ್ನ್ ಮಾಡಲು ಹೋಗಿದ್ದೇ ಈ ಅವಘಡಕ್ಕೆ ಕಾರಣವಾಗಿದೆ.
ಯೂಟರ್ನ್ ಮಾಡಲು ಹೋದ ಬೈಕ್ ಸವಾರ ಚೆನ್ನಾಗಿದ್ದು, ಬೇರೆ ಇಬ್ಬರು ಮೃತಪಟ್ಟಿದ್ದಾರೆ!
ಇದರ ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿದೆ. ವಿಡಿಯೋದಲ್ಲಿ ಒಬ್ಬಾತ ಬೈಕ್ ಅನ್ನು ಯೂಟರ್ನ್ ಮಾಡಲು ಹೋದದ್ದನ್ನು ನೋಡಬಹುದು. ಈ ಸಂದರ್ಭದಲ್ಲಿ ಹಿಂದುಗಡೆಯಿಂದ ವೇಗದಲ್ಲಿ ಬರುತ್ತಿದ್ದ ಬೈಕ್ ಸವಾರ ಅವನಿಗೆ ಡಿಕ್ಕಿ ಹೊಡೆದಿದ್ದಾನೆ. ಯೂಟರ್ನ್ ಮಾಡಲು ಹೋದವ ಬಿದ್ದಿದ್ದಾನೆ.
ಆದರೆ ನಿಯಂತ್ರಣ ಕಳೆದುಕೊಂಡ ಹಿಂದಿನ ಬೈಕ್ ಸವಾರ ಮುಂದೆ ಬರುತ್ತಿದ್ದ ಬೈಕ್ಗೆ ಗುದ್ದಿದ್ದಾನೆ. ಅಲ್ಲಿ ಭಯಾನಕ ಅಪಘಾತ ನಡೆದಿದ್ದು, ಇಬ್ಬರೂ ಬಿದ್ದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಯೂಟರ್ನ್ ಮಾಡಿ ಈ ಆವಾಂತರಕ್ಕೆ ಕಾರಣವಾದವ ಆರಾಮಾಗಿ ಎದ್ದಿದ್ದಾನೆ. ನಂತರ ಮುಂದೆ ಡಿಕ್ಕಿಯಾದ ಬೈಕ್ನಲ್ಲಿ ಇದ್ದವರು ಇಬ್ಬರು ಮೃತಪಟ್ಟಿದ್ದರೆ, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.