ನಮ್ಮ ಆರೋಗ್ಯದಲ್ಲಿ ಚೂರೇ ಚೂರು ಏರುಪೇರು ಆದ್ರೆ ಸಾಕು, ತಕ್ಷಣವೇ ಡಾಕ್ಟರ್ ಹತ್ರ ಚೆಕ್ಅಪ್‌ಗೆ ಹೋಗಿಬಿಡ್ತೇವೆ. ಡಾಕ್ಟರ್, ಅಂಥದ್ದೇನೂ ಆಗಿಲ್ಲ ಅಂತ ಹೇಳಿ ಒಂದೆರಡು ಟ್ಯಾಬ್ಲೆಟ್ ಬರೆದುಕೊಟ್ಟಾಗಲೇ ನಾವು ರಿಲ್ಯಾಕ್ಸ್ ಆಗ್ತೇವೆ. ಅಷ್ಟು ನಂಬಿಕೆ ಡಾಕ್ಟರ್ ಮೇಲೆ. ಇದೇ ಡಾಕ್ಟರ್ ನಿರ್ಲಕ್ಷ್ಯ ಮಾಡಿದ್ರೆ, ಆಗೋ ಎಡವಟ್ಟು ಒಂದೆರಡಲ್ಲ……ಇಲ್ಲಿ ನೋಡಿ ಯುವತಿಯೊಬ್ಬಳು ಬದುಕಿದ್ದಾಗಲೇ ಡೆತ್ ಸಟಿಫಿಕೇಟ್ ಕೊಟ್ಟಿದ್ದಾರೆ ತೆಲಂಗಾಣದ ಡಾಕ್ಟರ್.
ಹೌದು, ಜಹೀರಾಬಾದ್‌ನಲ್ಲಿರುವ ಸರಕಾರಿ ಆಸ್ಪತ್ರೆ ವೈದ್ಯರು ಮಾಡಿರೋ ಘನಂದಾರಿ ಕೆಲಸ ಇದು. ನರಸಿಂಹುಲು ಮತ್ತು ಶಾರದಾ ದಂಪತಿ ಪುತ್ರಿ 20 ವರ್ಷದ ಅರ್ಚನಾ ಬದುಕಿದ್ದಾಲೇ ಸತ್ತಿದ್ದಾಳೆ ಅಂತ ವೈದ್ಯರು ಘೋಷಿಸಿದ್ದಾರೆ.
ದೇಶದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ; ಕೇಂದ್ರದಿಂದ ಮಾರ್ಗಸೂಚಿ
ವಿಶೇಷ ದಿನದಂದು ಅರ್ಚನಾ ಉಪವಾಸ ಮಾಡಿದ್ದರು. ಉಪವಾಸ ಇದ್ದ ಕಾರಣ ಅವರು ನಿಶಕ್ತಿಯಿಂದ, ಸುಸ್ತಾಗಿ ಬಿದ್ದಿದ್ದಾರೆ. ತಕ್ಷಣವೇ ಅರ್ಚನಾ ಅವರ ಪತಿ, ಅವರ ತಂದೆ-ತಾಯಿಗೆ ತಿಳಿಸಿ ಜಹೀರಾಬಾದ್ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಮತ್ತು ಡ್ಯೂಟಿ ಡಾಕ್ಟರ್ ಸಂತೋಷ್ ಕೆಲಸ ಮಾಡುತ್ತಿದ್ದರು. ಅರ್ಚನಾ ಅವರನ್ನ ಪರೀಕ್ಷಿಸಿದ ಡಾಕ್ಟರ್ ಸಂತೋಷ್, ಅವರು ಮೃತಪಟ್ಟಿದ್ದಾರೆ ಅಂತ ಹೇಳಿದ್ದಾರೆ. ಅಷ್ಟೆ ಅಲ್ಲ ಅವರು ಬದುಕಿಲ್ಲ ಅನ್ನೋ ಪ್ರಮಾಣಪತ್ರವನ್ನ ಕೂಡಾ ನೀಡಿ, ರಿಜಿಸ್ಟರ್‌ನಲ್ಲಿ ಸಹಿ ಹಾಕಿಸಿಕೊಂಡಿದ್ದಾರೆ.
ವೈದ್ಯರ ಮಾತನ್ನ ನಂಬದ ಪೋಷಕರು ತಕ್ಷಣ ಅರ್ಚನಾ ಅವರನ್ನ ಸಂಗಾರೆಡ್ಡಿ ಜಿಲ್ಲೆಯ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಮಹಿಳೆಗೆ ಯಾವುದೇ ಜೀವಾಪಾಯ ಇಲ್ಲವೆಂದು ಹೇಳಿದ್ದಾರೆ. ಅಲ್ಲದೇ ಅವರನ್ನ ಅಲ್ಲಿ ಅಡ್ಮಿಟ್ ಮಾಡಿಕೊಂಡು ಹೆಚ್ಚಿನ ಚಿಕಿತ್ಸೆ ಕೊಟ್ಟು ಡಿಸ್ಚಾರ್ಜ್ ಮಾಡಿದ್ದಾರೆ.
ಈಗ ಅರ್ಚನಾ ಅವರು ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದಾರೆ. ಡಾಕ್ಟರ್ ಸಂತೋಷ್ ಮಾತನ್ನ ನಂಬಿದ್ದರೆ ಜೀವಂತ ಇದ್ದ ಮಗಳನ್ನ ಸತ್ತೇ ಹೋಗಿದ್ದಾಳೆಂದು ಭಾವಿಸಿಬಿಡುತ್ತಿದ್ದೇವು ಅಂತ ಅರ್ಚನಾ ಪೋಷಕರು ಹೇಳಿದ್ದಾರೆ.