ಮಡಿಕೇರಿ: ಅಭಿಮಾನಿಯೊಬ್ಬ ತೆಲಂಗಾಣದಿಂದ ನಟಿ ರಶ್ಮಿಕಾ ಮಂದಣ್ಣ ಹುಡುಕಿಕೊಂಡು ಮಡಿಕೇರಿಗೆ ಬಂದಿದ್ದಾನೆ.
ತೆಲಂಗಾಣದ ಆಕಾಶ್ ತ್ರಿಪಾಠಿ ಎಂಬಾತ ರಶ್ಮಿಕಾ ಮಂದಣ್ಣ ಅವರನ್ನು ಹುಡುಕಿಕೊಂಡು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮಕ್ಕೆ ಆಗಮಿಸಿದ್ದಾನೆ.
ಆಕಾಶ್ ತ್ರಿಪಾಠಿ ಗ್ರಾಮದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತ ರಶ್ಮಿಕಾ ಅವರ ಮನೆ ಹುಡುಕಾಡಿದ್ದಾನೆ. ಆತನ ಅನುಮಾನಾಸ್ಪದ ನಡೆ ಗಮನಿಸಿದ ವಿರಾಜಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ರಶ್ಮಿಕಾ ಮಂದಣ್ಣ ಅವರನ್ನು ನೋಡಲು ಬಂದಿರುವುದಾಗಿ ಹೇಳಿದ್ದಾನೆ. ತೆಲಂಗಾಣದಿಂದ ಮೈಸೂರಿಗೆ ರೈಲಿನಲ್ಲಿ ಬಂದಿದ್ದ ಆಕಾಶ್ ಮೈಸೂರಿನಿಂದ ಗೂಡ್ಸ್ ಆಟೋದಲ್ಲಿ ವಿರಾಜಪೇಟೆಗೆ ಆಗಮಿಸಿದ್ದಾನೆ. ಆತನಿಗೆ ಬುದ್ಧಿವಾದ ಹೇಳಿದ ಪೊಲೀಸರು ವಾಪಸ್ ಕಳುಹಿಸಿದ್ದಾರೆನ್ನಲಾಗಿದೆ.