ನವದೆಹಲಿ: ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಶುಕ್ರವಾರ 45 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದೆ.
ಜುಬ್ಲಿ ಹಿಲ್‌ನಿಂದ ಭಾರತ ಕ್ರಿಕೆಟ್‌ನ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮತ್ತು ಲಾಲ್ ಬಹದ್ದೂರ್ ನಗರದಿಂದ ಲೋಕಸಭೆಯ ಮಾಜಿ ಸಂಸದ ಮಧು ಗೌಡ್ ಯಾಸ್ಕಿ ಅವರನ್ನು ಕಣಕ್ಕಿಳಿಸಿದೆ.
ಪಾಲೇರ್ ನಿಂದ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿಗೆ ಟಿಕೆಟ್ ನೀಡಿದ್ದು, ಮುಂಗೋಡೆಯಿಂದ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ, ಖಮ್ಮಂನಿಂದ ತುಮ್ಮಲ ನಾಗೇಶ್ವರ್ ರಾವ್ ಮತ್ತು ಹುಸ್ನಾಬಾದ್ ವಿಧಾನಸಭಾ ಕ್ಷೇತ್ರದಿಂದ ಪೊನ್ನಂ ಪ್ರಭಾಕರ್ ಸ್ಪರ್ಧಿಸಲಿದ್ದಾರೆ.
ಇದಕ್ಕೂ ಮುನ್ನ ಕಾಂಗ್ರೆಸ್ 55 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಮೊದಲ ಪಟ್ಟಿಯಲ್ಲಿ ಮೂವರು ಹಾಲಿ ಲೋಕಸಭಾ ಸದಸ್ಯರು, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮತ್ತು ಮಲ್ಕಾಜ್‌ಗಿರಿ ಸಂಸದ ಕೋದಂಡಲ್‌ನಿಂದ ಎ. ರೇವಂತ್ ರೆಡ್ಡಿ, ನಲ್ಗೊಂಡದಿಂದ ಭೋಂಗಿರ್ ಸಂಸದ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಮತ್ತು ಹುಜೂರ್‌ನಗರದಿಂದ ನಲ್ಗೊಂಡ ಸಂಸದ ಎನ್. ಉತ್ತಮ್ ಕುಮಾರ್ ರೆಡ್ಡಿ ಸೇರಿದ್ದಾರೆ.
ಸಂಗಾರೆಡ್ಡಿಯಿಂದ ಪಿಸಿಸಿ ಕಾರ್ಯಾಧ್ಯಕ್ಷ ಟಿ. ಜಗ್ಗಾ ರೆಡ್ಡಿ, ಮುಳುಗಿನಿಂದ ಧನಸರಿ ಅನಸೂಯ ಅಲಿಯಾಸ್ ಸೀತಕ್ಕ, ಮಧಿರಾದಿಂದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಲ್ಲು ಭಟ್ಟಿ ವಿಕ್ರಮಾರ್ಕ(ಎಸ್‌ಸಿ), ಭದ್ರಾಚಲಂನಿಂದ ಪೊದೆಂ ವೀರಯ್ಯ ಸೇರಿದಂತೆ ಐವರು ಹಾಲಿ ಶಾಸಕರಿಗೂ ಪಕ್ಷ ಟಿಕೆಟ್ ನೀಡಿದೆ.
119 ಸದಸ್ಯರನ್ನು ಒಳಗೊಂಡಿರುವ ತೆಲಂಗಾಣ ವಿಧಾನಸಭೆಗೆ ನವೆಂಬರ್ 30 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ಬಿಆರ್‌ಎಸ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಾಥಮಿಕ ಪೈಪೋಟಿ ನಿರೀಕ್ಷಿಸಲಾಗಿದೆ.
2018 ರ ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶಗಳಲ್ಲಿ, ತೆಲಂಗಾಣ ರಾಷ್ಟ್ರ ಸಮಿತಿ (TRS) ಒಟ್ಟು 119 ಸ್ಥಾನಗಳಲ್ಲಿ 88 ಸ್ಥಾನಗಳೊಂದಿಗೆ ಅದ್ಭುತ ಜಯ ಸಾಧಿಸಿತು. ಬಹುಮತಕ್ಕೆ 60 ಸ್ಥಾನ ಬೇಕಿದೆ.