ಪುಲ್ವಾಮಾ ದಾಳಿಯಾಗಿ ಇಂದಿಗೆ ಮೂರು ವರ್ಷ. ಇಂತಾ ಕರಾಳ ದಿನದಂದು ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆ ಕೇಳುವುದರಲ್ಲಿ ತಪ್ಪೇನಿದೆ ಎಂದಿದ್ದಾರೆ. ಈ ಮೂಲಕ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ.
2019ರ ಸೆಪ್ಟಂಬರ್ ನಲ್ಲಿ ಭಾರತ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಬಾಲಾಕೋಟ್ನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಈ ಕುರಿತು ವಿರೋಧ ಪಕ್ಷಗಳು ಆಗಾಗ್ಗೇ ಕೇಂದ್ರ ಸರ್ಕಾರದಿಂದ ಪುರಾವೆ ಕೇಳುತ್ತಿರುತ್ತವೆ. ಈಗ ಈ ಸಾಲಿಗೆ ತೆಲಂಗಾಣ ಮುಖ್ಯಮಂತ್ರಿ ಸಹ ಸೇರಿಕೊಂಡಿದ್ದಾರೆ.
ಇಂದಿಗೂ ನಾನು ಪುರಾವೆ ಕೇಳುತ್ತಿದ್ದೇನೆ. ಭಾರತ ಸರ್ಕಾರ ಪುರಾವೆ ತೋರಿಸಲಿ. ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತದೆ ಅದಕ್ಕಾಗಿಯೇ ಜನರು ಪುರಾವೆ ಕೇಳುತ್ತಿದ್ದಾರೆ. ಬಿಜೆಪಿ ಸರ್ಜಿಕಲ್ ಸ್ಟ್ರೈಕ್ ಅನ್ನು ರಾಜಕೀಯವಾಗಿ ಬಳಸುತ್ತಿದೆ. ಗಡಿಯಲ್ಲಿ ಸೇನೆಯು ಹೋರಾಡುತ್ತಿದೆ, ದೇಶಕ್ಕಾಗಿ ಹೋರಾಡುತ್ತಾ ಸಾಯುತ್ತಿರುವವರು ಸೇನಾ ಸಿಬ್ಬಂದಿ. ಅದರ ಕ್ರೆಡಿಟ್ ಅವರಿಗೆ ಸಲ್ಲಬೇಕು, ಬಿಜೆಪಿಗೆ ಅಲ್ಲ ಎಂದು ಸಿಎಂ ಕೆಸಿಆರ್ ವಾಗ್ದಾಳಿ ನಡೆಸಿದ್ದಾರೆ.
ತಾಯಿ ಸಾವಿಗೆ ಕಾರಣವಾಯ್ತು ಮಗಳು ಹಾಕಿದ ʼವಾಟ್ಸಾಪ್ʼ ಸಂದೇಶ
ಕಾಂಗ್ರೆಸ್ ಮತ್ತು ಟಿಆರ್ಎಸ್ ಪದಗಳು ಪಾಕಿಸ್ತಾನದಂತೆಯೇ ಪ್ರತಿಧ್ವನಿಸುತ್ತವೆ. ಚುನಾವಣೆ ಬಂದಾಗಲೆಲ್ಲಾ ಅವರು ಹಿಜಾಬ್, ಸರ್ಜಿಕಲ್ ಸ್ಟ್ರೈಕ್ ನಂತಹ ಹೊಸ ಪ್ರಯೋಗಗಳನ್ನು ಮಾಡುತ್ತಾರೆ. ಏಕೆಂದರೆ ಅವರಿಗೆ ನೇರವಾಗಿ ಬಿಜೆಪಿಯೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಸರ್ಜಿಕಲ್ ಸ್ಟ್ರೈಕ್ ಅನ್ನು ಪ್ರಶ್ನಿಸುವುದು, ಅದರ ಪುರಾವೆ ಕೇಳುವುದು ಕೆಸಿಆರ್ ಅವರ ಮನಸ್ಥಿತಿ ಎಂತದ್ದು ಎಂದು ತೋರಿಸುತ್ತದೆ, ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರತ್ಯುತ್ತರ ನೀಡಿದ್ದಾರೆ.
ರಾಹುಲ್ ಗಾಂಧಿ ಅವರ ಭಾರತ ರಾಜ್ಯಗಳ ಒಕ್ಕೂಟ ಹಾಗೂ ಸರ್ಜಿಕಲ್ ಸ್ಟ್ರೈಕ್ ಪುರಾವೆ ವಿಚಾರದ ಬಗ್ಗೆ ಅಸ್ಸಾಂ ಸಿಎಂ ನೀಡಿದ್ದ ಹೇಳಿಕೆಯಿಂದ ಕೆಸಿಆರ್ ಹಾಗೂ ಹಿಮಂತ ಬಿಸ್ವಾ ಶರ್ಮಾ ಅವರ ನಡುವೆ ಮಾತಿನ ಚಕಮಕಿ ಶುರುವಾಗಿದೆ. ರಾಹುಲ್ ಗಾಂಧಿಯವರ ಹೇಳಿಕೆಯನ್ನು ಬೆಂಬಲಿಸಿರುವ ಕೆಸಿಆರ್, ಸರ್ಜಿಕಲ್ ಸ್ಟ್ರೈಕ್ ನ ಪುರಾವೆ ಕೇಳುವುದರಲ್ಲಿ ತಪ್ಪೇನಿದೆ ಎಂದಿದ್ದಾರೆ.