
ಹೈದರಾಬಾದ್: ಶಾಲೆಯಲ್ಲಿ ಶಿಕ್ಷಕರು ಹೊಡೆಯುತ್ತಾರೆ ಎಂದು ಎರಡನೇ ಕ್ಲಾಸ್ ಬಾಲಕನೊಬ್ಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ.
2ನೇ ತರಗತಿ ವಿದ್ಯಾರ್ಥಿ ಅನಿಲ್ ನಾಯ್ಕ್, ಮೆಹಬೂಬ್ ನಗರದ ಖಾಸಗಿ ಶಾಲಾ ಶಿಕ್ಷಕನ ವಿರುದ್ಧ ದೂರು ನೀಡಿದ್ದು, ಈ ವೇಳೆ ಮಹಿಳಾ ಇನ್ಸ್ ಪೆಕ್ಟರ್ ರಮಾದೇವಿ ವಿದ್ಯಾರ್ಥಿಯನ್ನು ವಿಚಾರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿ ನನಗೆ ಶಿಕ್ಷಕರು ಶಾಲೆಯಲ್ಲಿ ಹೊಡೆಯುತ್ತಿದ್ದಾರೆ. ಅವರನ್ನು ಬಂಧಿಸುವಂತೆ ಹೇಳಿದ್ದಾನೆ.
ಬಿಸಿ ಬಿಸಿ ಅನ್ನದ ಜತೆಗೆ ಸವಿಯಿರಿ ರುಚಿ ರುಚಿ ಅವರೆಕಾಯಿ ಸಾಂಬಾರು
ಬಳಿಕ ಇನ್ಸ್ ಪೆಕ್ಟರ್ ರಮಾದೇವಿ, ವಿದ್ಯಾರ್ಥಿಯ ಜತೆ ಶಾಲೆಗೆ ತೆರಳಿ ಶಿಕ್ಷಕರನ್ನು ವಿಚಾರಿಸಿದ್ದಾರೆ. ಶಿಕ್ಷಕ ಹಾಗೂ ವಿದ್ಯಾರ್ಥಿ ಇಬ್ಬರಿಗೂ ಕೌನ್ಸೆಲಿಂಗ್ ಮಾಡಿ ಮನವೊಲಿಸಲಾಗಿದೆ.