ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬರುವ ಮುಸ್ಲಿಂ ವಿದ್ಯಾರ್ಥಿನಿಯರು, ಅದಕ್ಕೆ ಪ್ರತಿಯಾಗಿ ಕೇಸರಿ ಶಾಲುಗಳನ್ನು ಹೊದ್ದುಕೊಂಡು ಕಾಲೇಜಿಗೆ ಬರುತ್ತಿರುವ ಮುಸ್ಲಿಮೇತರ ವಿದ್ಯಾರ್ಥಿ -ವಿದ್ಯಾರ್ಥಿನಿಯರು.
ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಪ್ರತಿಪಾದನೆಯ ದೊಡ್ಡ ವಿವಾದವು ಸದ್ಯ ಕರ್ನಾಟಕದ ಬಹುತೇಕ ಕಾಲೇಜುಗಳಲ್ಲಿ ಪ್ರದರ್ಶನವಾಗುತ್ತಿದೆ.
ಹಿಜಾಬ್-ಶಾಲುಗಳ ಸಮರದಲ್ಲಿ ಅನೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯು ಪೊಲೀಸರ ಲಾಠಿ ಚಾರ್ಜ್ಗೂ ದಾರಿ ಮಾಡಿಕೊಟ್ಟಿದೆ.
ಮೊದಲೇ ಕೊರೊನಾ ಹಾವಳಿಯಿಂದ ಶಾಲೆ-ಕಾಲೇಜುಗಳು ಸರಿಯಾಗಿ ನಡೆದಿಲ್ಲ. ಪಠ್ಯದ ಬೋಧನೆಯೇ ಸರಿಯಾಗಿ ಆಗಿಲ್ಲ ಎಂಬ ಆತಂಕದಲ್ಲಿ ಉತ್ತಮ ಅಂಕ ಪಡೆಯುವ ವಿದ್ಯಾರ್ಥಿಗಳು ಇದ್ದಾರೆ. ಅಂಕಗಳು, ಭವಿಷ್ಯದ ಅರಿವೇ ಇಲ್ಲದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಿಜಾಬ್-ಶಾಲುಗಳ ಧಾರ್ಮಿಕ ಸಂಘರ್ಷದಲ್ಲಿ ಮುಳುಗಿ ಹೋಗಿರುವುದು ದುರಾದೃಷ್ಟವೇ ಸರಿ ಎನ್ನಲಾಗುತ್ತಿದೆ.
BIG BREAKING: ಮತ್ತಷ್ಟು ಬಿಗಡಾಯಿಸಿದ ಹಿಜಾಬ್ ವಿಚಾರ; ಹೈಕೋರ್ಟ್ ಆದೇಶ ಪ್ರಶ್ನಿಸಿ ‘ಸುಪ್ರೀಂ’ಗೆ ಅರ್ಜಿ
ಕರ್ನಾಟಕ ದಾಟಿಕೊಂಡು ತೆಲಂಗಾಣಕ್ಕೂ ಹಿಜಾಬ್ ಗಲಾಟೆ ಹಬ್ಬಿದೆ. ಟ್ವಿಟರ್ನಲ್ಲಿ ವಿದ್ಯಾರ್ಥಿನಿಯೊಬ್ಬಳು ತನಗೆ ಕಾಲೇಜಿಗೆ ಪ್ರವೇಶ ನಿರಾಕರಿಸಲಾಯಿತು. ಹಿಜಾಬ್ ಧರಿಸಬೇಡ, ಸೀರೆ ಉಟ್ಟುಕೊಂಡು ಬರಬೇಕು ಎಂದು ಆಡಳಿತ ಮಂಡಳಿ ಒತ್ತಾಯ ಹೇರಿದೆ ಎಂದು ಆರೋಪಿಸಿದ್ದಾರೆ. ಟ್ವಿಟರ್ನಲ್ಲಿ ವಿದ್ಯಾರ್ಥಿನಿಯು ತನ್ನ ಹೆಸರನ್ನು ಫಾತಿಮಾ ಎಂದು ತಿಳಿಸಿದ್ದಾರೆ. ಮಜ್ಲೀಸ್ ಬಚಾವೋ ತೆಹ್ರೀಕ್ ಸಂಘಟನೆ ವಕ್ತಾರ ಅಮ್ಜದ್ ಉಲ್ಲಾಖಾನ್ ರಿಂದ ಫಾತಿಮಾ ನೆರವನ್ನು ಬಯಸಿದ್ದಾರೆ.
ಸದ್ಯಕ್ಕೆ ಆಕೆಯು ಕಾಲೇಜು ವಿರುದ್ಧ ಪೊಲೀಸ್ಗೆ ದೂರು ನೀಡಿಲ್ಲವಂತೆ. ಆದರೆ ಕಾಲೇಜಿನಲ್ಲಿ ತನ್ನ ಮೇಲೆ ನಡೆಸಲಾಗುತ್ತಿರುವ ತಾರತಮ್ಯ ನೀತಿ , ಬಟ್ಟೆ ಧರಿಸುವ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿರುವುದನ್ನು ಬಯಲು ಮಾಡಲು ಫಾತಿಮಾ ಬಯಸಿದ್ದಾರಂತೆ. ಸದ್ಯಕ್ಕೆ ಕರ್ನಾಟಕ ಹೈಕೋರ್ಟ್ ಅಂಗಳದಲ್ಲಿ ‘ಹಿಜಾಬ್ ಸಂಘರ್ಷ’ ಮುಟ್ಟಿದೆ. ಇದಕ್ಕಾಗಿಯೇ ವಿಸ್ತೃತ ನ್ಯಾಯಪೀಠ ರಚಿಸಿ ವಿಚಾರಣೆ ಕೈಗೊಳ್ಳಲಾಗುತ್ತಿದೆ. ಮೌಖಿಕ ಸೂಚನೆ ನೀಡಿರುವ ಕೋರ್ಟ್, ಯಾವುದೇ ಧಾರ್ಮಿಕತೆ ಪ್ರದರ್ಶಿಸುವ ಬಟ್ಟೆಗಳನ್ನು ವಿದ್ಯಾರ್ಥಿಗಳು ಧರಿಸುವಂತಿಲ್ಲ ಎಂದು ಖಡಕ್ಕಾಗಿ ಹೇಳಿದೆ.