ಬೆಳಿಗ್ಗೆ ಜಾಗಿಂಗ್ ಮಾಡುತ್ತಿರುವ ವೇಳೆ ತನ್ನ ಸಹೋದರಿಗೆ ವಿಷಕಾರಿ ಕೀಟ ಕಚ್ಚಿದ ಪರಿಣಾಮ ಆಕೆ ಆಸ್ಪತ್ರೆಗೆ ದಾಖಲಾಗುವಂತಾಗಿದ್ದು ಇದರಿಂದ ಸಿಟ್ಟಿಗೆದ್ದ ಹತ್ತು ವರ್ಷದ ಬಾಲಕ, ರಸ್ತೆ ಪಕ್ಕದ ಗಿಡ ಗಂಟಿಗಳನ್ನು ತೆಗೆದು ಹಾಕದ ಅಧಿಕಾರಿಗಳ ವಿರುದ್ಧ ಧರಣಿ ಕೂತಿದ್ದಾನೆ.
ಇಂತಹದೊಂದು ಘಟನೆ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ರಾಮಗೊಂಡಮ್ ಬಲ್ದಿಯಾದ ಎನ್ಟಿಪಿಸಿ ಗೌತಮಿ ನಗರ ಎಕ್ಸ್ ಸರ್ವಿಸ್ಮನ್ ಕಾಲೋನಿಯಲ್ಲಿ ನಡೆದಿದ್ದು, ಹತ್ತು ವರ್ಷದ ಕೇಶವ ಎಂಬ ಬಾಲಕ ಧರಣಿ ಕೂತವನಾಗಿದ್ದಾನೆ.
5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ ತನ್ನ ಸಹೋದರಿಯೊಂದಿಗೆ ಜಾಗಿಂಗ್ ಮಾಡುವಾಗ ಆಕೆಗೆ ವಿಷಕಾರಿ ಕೀಟ ಕಚ್ಚಿತ್ತು. ರಸ್ತೆ ಅಕ್ಕಪಕ್ಕದ ಗಿಡ ಗಂಟಿಗಳನ್ನು ತೆಗೆದು ಹಾಕದೇ ಇರುವುದೇ ಇದಕ್ಕೆ ಕಾರಣ ಎಂದು ಆರೋಪಿಸಿ ಬಾಲಕ ಧರಣಿ ಕೂತಿದ್ದಾನೆ.