
ಕಳೆದ ವರ್ಷ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ವರ್ಲ್ಡ್‌ವೈಡ್ ಲಿವಿಂಗ್ (ಡಬ್ಲ್ಯುಸಿಒಎಲ್) ಪಟ್ಟಿಯನ್ನು ಪ್ರಕಟಿಸಿದಾಗ, ಟೆಲ್ ಅವಿವ್ ಐದನೇ ಸ್ಥಾನದಲ್ಲಿತ್ತು. ಪ್ಯಾರಿಸ್ ಹಾಂಗ್ ಕಾಂಗ್ ಮತ್ತು ಜುರಿಚ್‌ನೊಂದಿಗೆ ಜಂಟಿ ಅಗ್ರಸ್ಥಾನವನ್ನು ಪಡೆದುಕೊಂಡಿತ್ತು. ಆದರೆ, ಈ ವರ್ಷ ಸಿಂಗಾಪುರದೊಂದಿಗೆ ಪ್ಯಾರಿಸ್ ಜಂಟಿ ಎರಡನೇ ಸ್ಥಾನಕ್ಕೆ ಕುಸಿದಿದೆ.
ಇಐಯು ಪ್ರಕಾರ, ಗಗನಕ್ಕೇರುತ್ತಿರುವ ಕರೆನ್ಸಿ ಮತ್ತು ಸರಕುಗಳ ಬೆಲೆಗಳಲ್ಲಿನ ಹೆಚ್ಚಳದಿಂದಾಗಿ ಟೆಲ್ ಅವಿವ್ ವಾಸಿಸಲು ಅತ್ಯಂತ ದುಬಾರಿ ನಗರವಾಗಲು ಕಾರಣವಾಗಿದೆ. ಟೆಲ್ ಅವಿವ್ ನಲ್ಲಿ ವಸತಿ ಪ್ರಾಪರ್ಟಿ ಬೆಲೆಗಳು ಕೂಡ ಏರಿಕೆ ಕಂಡಿವೆ ಎಂದು ವರದಿಯಾಗಿದೆ.
ಟಾಪ್ 10 ದುಬಾರಿ ನಗರಗಳು ಇಲ್ಲಿವೆ
ಸಿಂಗಾಪುರ್ ನಗರವು ಡಬ್ಲ್ಯುಸಿಒಎಲ್ ಸೂಚ್ಯಂಕದಲ್ಲಿ 104 ಅಂಕಗಳೊಂದಿಗೆ ಪ್ಯಾರಿಸ್‌ನೊಂದಿಗೆ ಜಂಟಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಸಿಂಗಾಪುರವು ಈ ಸಾಧನೆಯನ್ನು ಸಾಧಿಸಲು ಕಾರಣವೆಂದರೆ ಅದರ ನಿರಂತರವಾಗಿ ಆಸ್ತಿ ಬೆಲೆಗಳಲ್ಲಿ ಏರಿಯಾಗಿರುವುದು.
ಕಳೆದ ವರ್ಷ ಅಗ್ರ ಸ್ಥಾನದಿಂದ ಈ ವರ್ಷ ನಾಲ್ಕನೇ ಸ್ಥಾನಕ್ಕೆ ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್ ಪಡೆದುಕೊಂಡಿದೆ. ಜ್ಯೂರಿಚ್ ಅನ್ನು ಬ್ಯಾಂಕಿಂಗ್ ಮತ್ತು ಹಣಕಾಸಿನ ಜಾಗತಿಕ ಕೇಂದ್ರವೆಂದು ಕರೆಯಲಾಗುತ್ತದೆ. ಇದು ವಿಶ್ವದ ದುಬಾರಿ ನಗರಗಳಲ್ಲಿ ಒಂದಾಗಿದೆ.
ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಹಾಂಗ್ ಕಾಂಗ್ ವಿಶೇಷ ಆಡಳಿತ ಪ್ರದೇಶ ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇದನ್ನು ಜ್ಯೂರಿಚ್ ಮತ್ತು ಪ್ಯಾರಿಸ್ ಜೊತೆಗೆ ವಾಸಿಸಲು ವಿಶ್ವದ ಅತ್ಯಂತ ದುಬಾರಿ ನಗರ ಎಂದು ಘೋಷಿಸಲಾಗಿದೆ. ಹೆಚ್ಚಿನ ವಸತಿ ಬಾಡಿಗೆಯು ಹಾಂಗ್ ಕಾಂಗ್ ಅನ್ನು ವಾಸಿಸಲು ದುಬಾರಿ ಸ್ಥಳವನ್ನಾಗಿ ಮಾಡಿದೆ ಎಂದು ಹೇಳಲಾಗುತ್ತಿದೆ.
ಇನ್ನು ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿ ನ್ಯೂಯಾರ್ಕ್ ಇದೆ. ಎಂಪೈರ್ ಸ್ಟೇಟ್ ಬಿಲ್ಡಿಂಗ್, ಟೈಮ್ಸ್ ಸ್ಕ್ವೇರ್ ಮತ್ತು ಸೆಂಟ್ರಲ್ ಪಾರ್ಕ್‌ನಂತಹ ಪ್ರಪಂಚದ ಕೆಲವು ಜನಪ್ರಿಯ ಸೈಟ್‌ಗಳ ನೆಲೆಯಾಗಿರುವ ನಗರವು, ಜನರು ವಾಸಿಸಲು ಅತಿ ಹೆಚ್ಚು ದುಬಾರಿಯಾಗಿಲ್ಲ.
ಸ್ವಿಸ್ ಆಲ್ಪ್ಸ್ ಮತ್ತು ಜುರಾ ಪರ್ವತಗಳಿಂದ ಸುತ್ತುವರೆದಿರುವ ಸುಂದರವಾದ ಜಿನೀವಾ ನಗರವು ವಿಶ್ವದ ಆರನೇ ದುಬಾರಿ ನಗರವಾಗಿದೆ. ಕಳೆದ ವರ್ಷ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿತ್ತು.
ಡೆನ್ಮಾರ್ಕ್‌ನ ಕೋಪನ್‌ಹೇಗನ್ ಕಳೆದ ವರ್ಷದಿಂದ ಒಂದು ಸ್ಥಾನ ಮೇಲೆ ಬಂದಿದ್ದು, ವಾಸಿಸಲು ವಿಶ್ವದ ಎಂಟನೇ ಅತ್ಯಂತ ದುಬಾರಿ ನಗರವಾಗಿದೆ.
ಅಮೆರಿಕಾದ ಚಲನಚಿತ್ರ ಮತ್ತು ದೂರದರ್ಶನ ಉದ್ಯಮದ ಕೇಂದ್ರವಾದ ಲಾಸ್ ಏಂಜಲೀಸ್ ವಾಸಿಸಲು ವಿಶ್ವದ ಒಂಬತ್ತನೇ ದುಬಾರಿ ನಗರವಾಗಿ ಹೊರಹೊಮ್ಮಿದೆ. ಕಳೆದ ವರ್ಷ ಆರನೇ ಸ್ಥಾನದಲ್ಲಿದ್ದ ಜಪಾನ್‌ನ ಒಸಾಕಾ ಈ ವರ್ಷ ಹತ್ತನೇ ಸ್ಥಾನಕ್ಕೆ ಕುಸಿತ ಕಂಡಿದೆ.


