ಕಲಬುರಗಿ: ಅಮುಲ್ ಜೊತೆಗೆ ಕೆಎಂಎಫ್ ನಂದಿನಿ ವಿಲೀನ ಎಂಬುವುದು ಸುಳ್ಳು ಸುದ್ದಿಯಾಗಿದೆ. ಕಾಂಗ್ರೆಸ್ ಪಕ್ಷ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಕಲಬುರ್ಗಿಯಲ್ಲಿ ಬಿಜೆಪಿ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಅಮುಲ್ ಔಟ್ಲೆಟ್ ಗಳು ದಶಕಗಳಿಂದ ಕರ್ನಾಟಕದಲ್ಲಿ ಇವೆ. ಅಮೂಲ್ ಗೆ ನಂದಿನಿ ಕಾಂಪಿಟೇಶನ್ ಮಾಡುತ್ತಾ ಮುಂದೆ ಬರುತ್ತಿದೆ. ಮೊನ್ನೆಯಿಂದ ಕಾಂಗ್ರೆಸ್ ಪಕ್ಷ ಹೊಸ ವಿವಾದ ಶುರು ಮಾಡಿದೆ. ಅಮುಲ್ ತಮಿಳುನಾಡು, ಆಂಧ್ರ ಬ್ರಾಂಡ್ ಆಗಿದ್ದರೆ ಸುಮ್ಮನಿರುತ್ತಿದ್ದರು. ಹಾಗೆ ಆಗಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಸಮಸ್ಯೆ ಇರುತ್ತಿರಲಿಲ್ಲ. ಮೋದಿ ಅವರನ್ನು ವಿರೋಧ ಮಾಡುವುದಕ್ಕಾಗಿ ಈ ವಿಷಯ ಹಿಡಿದುಕೊಂಡಿದ್ದಾರೆ. ಅಮುಲ್ ಮತ್ತು ಮೋದಿ ಒಂದೇ ರಾಜ್ಯದವರು ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.