ಪಾಟ್ನಾ: ಆರ್.ಜೆ.ಡಿ. ಮುಖಂಡ ತೇಜಸ್ವಿ ಯಾದವ್ ಸೋಮವಾರ ಟ್ರ್ಯಾಕ್ಟರ್ ಏರಿ ವಿಧಾನಸಭೆಗೆ ಬಂದರು. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ, ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕಾಯ್ದೆ ರೈತ ವಿರೋಧಿ ಎಂದು ಆರೋಪಿಸಿದ ಅವರು ಟ್ರ್ಯಾಕ್ಟರ್ ಯಾನ ನಡೆಸಿದರು.
ಬಿಹಾರ ಎಪಿಎಂಸಿಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳು ಖರೀದಿಯಾಗುತ್ತಿವೆ. ಸಿಎಂ ನಿತೀಶ್ ಕುಮಾರ್ ಸುಮ್ಮನೆ ಕುಳಿತಿದ್ದಾರೆ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿ ಮಾಜಿ ಸಂಸದನಿಗೆ ಬಿಗ್ ಶಾಕ್
ಎಪಿಎಂಸಿಗಳು ನಾಶವಾಗುವುದು, ತೈಲ ಬೆಲೆ ಏರಿಕೆಯನ್ನು ತಡೆಯುವುದನ್ನು ನಾವು ಸಿಎಂ ಅವರಿಂದ ನಿರೀಕ್ಷೆ ಮಾಡುತ್ತೇವೆ ಎಂದು ತೇಜಸ್ವಿ ಹೇಳಿದ್ದಾರೆ. ಯಾದವ್ ಟ್ರ್ಯಾಕ್ಟರ್ ರ್ಯಾಲಿಗೆ ಆರ್.ಜೆ.ಡಿ.ಜನರಲ್ ಸೆಕ್ರೆಟರಿ ಅಲೋಕ್ ಮೆಹ್ತಾ ಹಾಗೂ ಇತರರು ಜತೆಯಾದರು.