ತಮ್ಮ ತಂದೆ ಲಾಲು ಪ್ರಸಾದ್ ಯಾದವ್ಗೆ ಜಾಮೀನು ಸಿಕ್ಕರೂ ಅವರನ್ನು ದೆಹಲಿಯಲ್ಲಿ ಒತ್ತೆಯಾಳಾಗಿ ಇಟ್ಟುಕೊಳ್ಳಲಾಗಿದೆ ಎಂದು ಆರ್ಜೆಡಿ ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್ ಆಪಾದಿಸಿದ್ದಾರೆ.
“ತಿಂಗಳುಗಳ ಹಿಂದೆಯೇ ನಮ್ಮ ತಂದೆಗೆ ಜಾಮೀನು ಸಿಕ್ಕರೂ ಸಹ ಅವರನ್ನು ದೆಹಲಿಯಲ್ಲಿ ಇನ್ನೂ ಒತ್ತೆ ಇಟ್ಟುಕೊಳ್ಳಲಾಗಿದೆ. ನನ್ನ ತಂದೆಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರ ಮೇಲೆ ಯಾವುದೇ ಒತ್ತಡ ಹೇರಲು ನನಗೆ ಇಷ್ಟವಿಲ್ಲ. ಅವರಿಗೆ ನಾನಾ ರೀತಿಯ ಕಾಯಿಲೆಗಳು ಬಂದಿವೆ. ಆರ್ಜೆಡಿಯ ರಾಷ್ಟ್ರೀಯ ಅಧ್ಯಕ್ಷರಾಗುವ ಕನಸನ್ನು ಪಕ್ಷದೊಳಗೆ ಕೆಲ ಮಂದಿ ಕಾಣುತ್ತಿದ್ದಾರೆ. ನನ್ನ ತಂದೆ ಜೈಲಿನಿಂದ ಹೊರಬಂದು ಬಹುತೇಕ ಒಂದು ವರ್ಷವಾದರೂ ಅವರಿನ್ನೂ ಅಲ್ಲೇ ಇದ್ದಾರೆ,” ಎಂದು ತೇಜ್ ಪ್ರತಾಪ್ ತಿಳಿಸಿದ್ದಾರೆ.
BREAKING NEWS: ಭವಾನಿಪುರದಲ್ಲಿ ದೀದಿಗೆ ಭರ್ಜರಿ ಗೆಲುವು, ಮಮತಾ ಬ್ಯಾನರ್ಜಿಗೆ 58 ಸಾವಿರ ಮತಗಳ ಅಂತರದ ಜಯ
“ನಾನು ನನ್ನ ತಂದೆಯೊಂದಿಗೆ ಮಾತನಾಡಿ, ಪಟನಾದಲ್ಲೇ ಉಳಿದು ಪಕ್ಷ ಹಾಗೂ ಸಂಘಟನೆಯ ವ್ಯವಹಾರಗಳನ್ನು ನೋಡಿಕೊಳ್ಳಲು ಕೇಳಿಕೊಂಡಿದ್ದೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುವ ಕನಸನ್ನು ಕಾಣುತ್ತಿರುವ 4-5 ಮಂದಿ ಇದ್ದಾರೆ. ಅವರ ಹೆಸರು ಹೇಳುವ ಅಗತ್ಯವಿಲ್ಲ ಏಕೆಂದರೆ ಅವರು ಯಾರೆಂದು ಎಲ್ಲರಿಗೂ ಗೊತ್ತಿದೆ,” ಎಂದು ಲಾಲು ಪುತ್ರ ತಿಳಿಸಿದ್ದಾರೆ.