alex Certify ಮನಃಶ್ಶಾಂತಿ ಅರಸಿ ಮಥುರಾ ಪ್ರವಾಸ ಕೈಗೊಂಡ ಲಾಲೂ​ ಪುತ್ರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಃಶ್ಶಾಂತಿ ಅರಸಿ ಮಥುರಾ ಪ್ರವಾಸ ಕೈಗೊಂಡ ಲಾಲೂ​ ಪುತ್ರ..!

ಬಿಹಾರದ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾದ ಆರ್​ಜೆಡಿಯಲ್ಲಿ ಆಂತರಿಕ ಕಿತ್ತಾಟ ಮುಗಿದಂತೆ ಕಾಣುತ್ತಿಲ್ಲ. ಈ ಒಳ ಜಗಳಗಳ ನಡುವೆಯೇ ಲಾಲೂ ಪ್ರಸಾದ್​ ಯಾದವ್​ ಹಿರಿಯ ಪುತ್ರ ತೇಜ್​ ಪ್ರತಾಪ್​ ಯಾದವ್​​ ಮನಃಶ್ಶಾಂತಿಯನ್ನು ಅರಸುತ್ತಾ ಮಥುರೆಗೆ ತೆರಳಿದ್ದಾರೆ.

ಮೂಲಗಳ ಪ್ರಕಾರ ತೇಜ್​ ಪ್ರತಾಪ್​ ಯಾದವ್​​ ಕುಟುಂಬದಲ್ಲಿ ಉಂಟಾಗಿರುವ ಮನಸ್ತಾಪಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಹೀಗಾಗಿ ಸಧ್ಯಕ್ಕೆ ಅವರು ಆಧ್ಯಾತ್ಮಿಕ ಜೀವನದತ್ತ ವಾಲಲು ನಿರ್ಧರಿಸಿದ್ದಾರೆ. ಹೀಗಾಗಿ ತೇಜ್​ ಪ್ರತಾಪ್​ ಉತ್ತರ ಪ್ರದೇಶದಲ್ಲಿ ಮಥುರಾ ಯಾತ್ರೆ ಕೈಗೊಂಡಿದ್ದಾರೆ ಎನ್ನಲಾಗಿದೆ.

ಅದ್ಧೂರಿ ಹಬ್ಬದಾಚರಣೆಗೆ ಕೇಂದ್ರ ಸರ್ಕಾರದಿಂದ ಬ್ರೇಕ್​: ಹೊಸ ಮಾರ್ಗಸೂಚಿ ಬಿಡುಗಡೆ

ಅಂದಹಾಗೆ ಈ ಮಥುರಾ ಪ್ರವಾಸದ ವೇಳೆ ತೇಜ್​ ಪ್ರತಾಪ್​ ಮಾಧ್ಯಮಗಳ ಜೊತೆ ಅಂತರವನ್ನು ಕಾಯ್ದುಕೊಂಡಿದ್ದಾರೆ. ಕಳೆದ 2 ದಿನಗಳಿಂದ ಮಥುರಾದಲ್ಲಿರುವ ತಮ್ಮ ಧಾರ್ಮಿಕ ಗುರುವಿನ ನಿವಾಸದಲ್ಲಿ ತಂಗಿದ್ದಾರೆ ಎನ್ನಲಾಗಿದೆ. ತೇಜ್​ಪ್ರತಾಪ್​ ಯಾದವ್​ ತಮ್ಮ ಆಧ್ಯಾತ್ಮಿಕ ಗುರುವಿನ ಬಳಿ ಆಶೀರ್ವಾದ ಪಡೆದುಕೊಳ್ಳುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

ಆರ್​ಜೆಡಿ ಆಂತರಿಕ ಕಿತ್ತಾಟವು ಸದ್ಯ ಭಾರೀ ಸುದ್ದಿಯಲ್ಲಿದೆ. ತೇಜ್​ ಪ್ರತಾಪ್​ ಯಾದವ್​ ಆರ್​ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್​ ಸಿಂಗ್​ರನ್ನು ಕೆಳಗಿಳಿಸುವಂತೆ ಒತ್ತಾಯ ಮಾಡಿದ್ದರು. ಇತ್ತ ತೇಜ್​ ಪ್ರತಾಪ್​ ಸಹೋದರ ಹಾಗೂ ಬಿಹಾರದ ಮಾಜಿ ಡಿಸಿಎಂ ತೇಜಸ್ವಿ ಯಾದವ್​ ಈ ಆಗ್ರಹಕ್ಕೆ ವಿರೋಧ ಮಾಡಿದ್ದರು.

ಈ ಹಿಂದೆ ಕೂಡ ತೇಜ್​ ಪ್ರತಾಪ್​​ ಮನಃಶ್ಶಾಂತಿಯನ್ನು ಅರಸಿ ಮಥುರಾಗೆ ಪ್ರವಾಸ ಕೈಗೊಂಡಿದ್ದರು. ಅಂದಹಾಗೆ ತೇಜ್​ ಪ್ರತಾಪ್​ ಮಥುರಾದಿಂದ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...