ನಗು ಅನ್ನೋದು ನಮ್ಮ ಬದುಕಲ್ಲಿ ಬಹಳ ಮುಖ್ಯ. ನಗು ನೋವನ್ನು ಮರೆಸುತ್ತೆ, ಅಸಾಧ್ಯ ಎನಿಸುವಂತಹ ಕೆಲಸವೂ ಸಾಧ್ಯವಾಗೋದು ನಗುವಿನಿಂದ್ಲೇ. ನಗು ಅದ್ಭುತವಾಗಿರಬೇಕಂದ್ರೆ ಹಲ್ಲುಗಳು ಚೆನ್ನಾಗಿರಬೇಕು. ಹೊಳೆಯುವ ದಂತಪಂಕ್ತಿ ನಮ್ಮದಾಗಿರ್ಬೇಕು.
ಎಷ್ಟೋ ಮಂದಿ ತಮ್ಮ ಹಳದಿ ಹಲ್ಲುಗಳಿಂದ ಕಿರಿಕಿರಿ ಅನುಭವಿಸ್ತಾರೆ, ಅವುಗಳನ್ನು ಬೆಳ್ಳಗಾಗಿಸೋಕೆ ವೈದ್ಯರ ಬಳಿ ದೌಡಾಯಿಸ್ತಾರೆ. ಆದ್ರೆ ಮನೆಯಲ್ಲೇ ನೀವು ನಿಮ್ಮ ಹಲ್ಲುಗಳನ್ನು ಬೆಳ್ಳಗಾಗಿಸಿಕೊಳ್ಳಬಹುದು. ಅದಕ್ಕೆ ಬೇಕಾಗೋದು ಎರಡೇ ಸಾಮಗ್ರಿ, ನಿಂಬೆ ಹಣ್ಣಿನ ಸಿಪ್ಪೆ ಮತ್ತು ತೆಂಗಿನ ಎಣ್ಣೆ.
ರಾತ್ರಿ ಮಲಗುವ ಮುನ್ನ ನಿಂಬೆ ಹಣ್ಣಿನ ಸಿಪ್ಪೆಯಿಂದ ಹಲ್ಲುಗಳ ಮೇಲೆ ಚೆನ್ನಾಗಿ ಉಜ್ಜಿ. ಮೂಲೆ ಮೂಲೆಯಲ್ಲೂ ನಿಂಬೆ ಸಿಪ್ಪೆಯನ್ನು ಹಾಕಿ ಉಜ್ಜಿದ್ರೆ ನಿಮ್ಮ ಹಲ್ಲುಗಳು ಫಳಫಳ ಹೊಳೆಯುತ್ತವೆ. ಅಷ್ಟೇ ಅಲ್ಲ ನಿಂಬೆ ಹಣ್ಣಿನಲ್ಲಿ ಸಿ ಜೀವಸತ್ವ ಇರುವುದರಿಂದ ಅದು ನಿಮ್ಮ ದಂತಪಂಕ್ತಿ ಹೊಳೆಯುವಂತೆ ಮಾಡುತ್ತದೆ.
ಇನ್ನು ತೆಂಗಿನ ಎಣ್ಣೆಯಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಬೆಳಗ್ಗೆ ಎದ್ದ ತಕ್ಷಣ ಎರಡು ಚಮಚ ತೆಂಗಿನ ಎಣ್ಣೆಯನ್ನು ಬಾಯಿಯಲ್ಲಿ ಇಟ್ಟುಕೊಳ್ಳಿ, ನುಂಗಬೇಡಿ. ಸುಮಾರು 10 ನಿಮಿಷ ಎಣ್ಣೆ ನಿಮ್ಮ ಬಾಯಲ್ಲೇ ಇರಲಿ. ಹಲ್ಲು ಮತ್ತು ವಸಡಿನ ಮೂಲೆ ಮೂಲೆಗೂ ಎಣ್ಣೆಯ ಸ್ಪರ್ಶವಾಗಬೇಕು. ಇದರಿಂದ ನಿಮ್ಮ ಹಲ್ಲುಗಳಲ್ಲಿರುವ, ಬಾಯಿಯಲ್ಲಿರುವ ಕೀಟಾಣುಗಳೆಲ್ಲ ನಾಶವಾಗಿ ಹಲ್ಲು ಹುಳುಕಾಗುವುದಿಲ್ಲ. ಹೊಳಪು ಕೂಡ ಸಿಗುತ್ತದೆ.