ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗ್ತಿದೆ. ಸಣ್ಣ ಸಮಸ್ಯೆ ನಿರ್ಲಕ್ಷ್ಯ ಮಾಡಿದ್ರೂ ಅದು ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಇದಕ್ಕೆ ಕೈಲ್ ಸ್ಮಿತ್ ಉತ್ತಮ ನಿದರ್ಶನ. ಕೈಲ್ ಸ್ಮಿತ್ ಫಿಟ್ ಮತ್ತು ಆರೋಗ್ಯಕರ ಹುಡುಗ. ನಿಯಮಿತವಾಗಿ ಸ್ಮಿತ್, ಬಾಸ್ಕೆಟ್ ಬಾಲ್ ಆಡ್ತಿದ್ದ. ಆರೋಗ್ಯವಾಗಿದ್ದೀರೆಂಬ ಭಾವನೆಯಲ್ಲಿ ವೈದ್ಯರ ಬಳಿ ಹೋಗುವುದನ್ನು ತಪ್ಪಿಸಬೇಡಿ. ಹಾಗೆ ಆರೋಗ್ಯ ಹದಗೆಟ್ಟಾಗ ಅದನ್ನು ನಿರ್ಲಕ್ಷ್ಯಿಸಬೇಡಿ. ಇದು ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಆತ ಹೇಳಿದ್ದಾನೆ.
ಕೈಲ್ ಸ್ಮಿತ್, ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದ. ಆತ ಆಸ್ಪತ್ರೆಗೆ ಹೋಗಿದ್ದಾನೆ. ಆಸ್ಪತ್ರೆಗೆ ಹೋದಾಗ ಆತನ ಹೊಟ್ಟೆ ಒಂಭತ್ತು ತಿಂಗಳ ಗರ್ಭಿಣಿಯಂತೆ ಕಾಣ್ತಿತ್ತಂತೆ. ಕೈಲ್ ಸ್ಮಿತ್ ಅಲ್ಟ್ರಾಸೌಂಡ್ ಮತ್ತು ಸಿಟಿ ಸ್ಕ್ಯಾನ್ ಮಾಡಿದಾಗ ದಂಗಾಗಿದ್ದಾರೆ. ಆತನ ಹೊಟ್ಟೆಯಲ್ಲಿ 15 ಸೆಂಟಿಮೀಟರ್ ನ ಕ್ಯಾನ್ಸರ್ ಗಡ್ಡೆ ಕಾಣಿಸಿಕೊಂಡಿದೆ.
ಈವಿಂಗ್ ಸಾರ್ಕೋಮಾ ಹೆಸರಿನ ಕ್ಯಾನ್ಸರ್ ಗಡ್ಡೆ ಇದು ಎಂಬುದು 18 ವರ್ಷದ ಕೈಲ್ ಗೆ ಗೊತ್ತಾಗಿದೆ. ಈ ಕ್ಯಾನ್ಸರ್ ಸಾಮಾನ್ಯವಾಗಿ ಮಕ್ಕಳು ಹಾಗೂ ವಯಸ್ಕರಲ್ಲಿ ಕಂಡು ಬರುತ್ತದೆ. ಕೈಲ್ ಗೆ ಈಗ ಕೀಮೋಥೆರಪಿ ನಡೆಯುತ್ತಿದೆ.
ಬಾಸ್ಕೆಟ್ ಬಾಲ್ ಆಡ್ತಿದ್ದ ಕೈಲ್, ವೈದ್ಯರು ಕ್ಯಾನ್ಸರ್ ಬಗ್ಗೆ ಹೇಳ್ತಿದ್ದಂತೆ ನಕ್ಕಿದ್ದನಂತೆ. ಇದು ಸಾಧ್ಯವಿಲ್ಲ ಎಂದಿದ್ದಾನೆ. ಸಿಕ್ಸ್ ಪ್ಯಾಕ್ ಪಡೆಯುವ ಬದಲು ಕೈಲ್, ಗರ್ಭಿಣಿಯಂತೆ ಕಾಣ್ತಿದ್ದನಂತೆ. ನಾನು ಇದನ್ನು ನಿರ್ಲಕ್ಷ್ಯ ಮಾಡಿದ್ರೆ ನಾನು ಬದುಕುಳಿಯುತ್ತಿರಲಿಲ್ಲವೆಂದು ಕೈಲ್ ಹೇಳಿದ್ದಾನೆ. ಕೈಲ್, ಕ್ಲಾಟರ್ಬ್ರಿಡ್ಜ್ ಕ್ಯಾನ್ಸರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗಡ್ಡೆಯನ್ನು ತೆಗೆಯಲಾಗಿದ್ದು, ಬೇರೆ ಭಾಗಗಳಿಗೆ ಹರಡದಂತೆ ಚಿಕಿತ್ಸೆ ನೀಡಲಾಗ್ತಿದೆ.
ಕೈಲ್, ಸಾಕಷ್ಟು ಸಮಸ್ಯೆ ಎದುರಿಸಿದ್ದಾನೆ. ಮೂರು ತಿಂಗಳಿಂದ ಆಸ್ಪತ್ರೆಯಲ್ಲಿರುವ ಕೈಲ್, ಯಾವುದೇ ಕಾರಣಕ್ಕೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ ಎಂದಿದ್ದಾರೆ. ಚಿಕ್ಕವರಿರಲಿ ಇಲ್ಲ ದೊಡ್ಡವರಿರಲಿ, ವೈದ್ಯಕೀಯ ಸಲಹೆಯನ್ನು ಪಡೆಯುವುದನ್ನು ನಿಲ್ಲಿಸಬೇಡಿ ಎಂದು ಕೈಲ್ ಹೇಳಿದ್ದಾರೆ. ಸಾವು, ಅನಾರೋಗ್ಯಕ್ಕೆ ವಯಸ್ಸು ಮುಖ್ಯವಲ್ಲ. ಕೊರೊನಾ ಸಂದರ್ಭದಲ್ಲಿ ಸಣ್ಣ ವಯಸ್ಸಿನವರೂ ಸಾವನ್ನಪ್ಪಿದ್ದಾರೆ. ವಿಶೇಷವಾಗಿ ಕೊರೊನಾ ಸಮಯದಲ್ಲಿ ಅಗತ್ಯವಾದ ಸಹಾಯ ಪಡೆಯುವ ಅಗತ್ಯವಿದೆ ಎಂದವರು ಹೇಳಿದ್ದಾರೆ. ನನ್ನ ಭವಿಷ್ಯ ಹೇಗಿದೆ ಎಂಬುದು ನನಗೆ ಗೊತ್ತಿಲ್ಲ ಎಂದ ಕೈಲ್, ಬದಲಾದ ಜೀವನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾನೆ.