ಮಕ್ಕಳಿಗೆ ಶಾಲೆ ಎಂದ್ರೆ ದೂರ. ಶಾಲೆ ತಪ್ಪಿಸಿಕೊಳ್ಳಲು ಮಕ್ಕಳು ನೆಪ ಹೇಳ್ತಾರೆ. ಆದ್ರೆ ಬ್ರಿಟನ್ ಮಕ್ಕಳು ಶಾಲೆ ತಪ್ಪಿಸಿಕೊಳ್ಳಲು ಮಾಡ್ತಿರುವ ಕೆಲಸ ಕೇಳಿದ್ರೆ ದಂಗಾಗ್ತಿರಾ. ಅಪ್ರಾಪ್ತ ವಯಸ್ಕರು ನಕಲಿ ಕೊರೊನಾ ವರದಿಯನ್ನು ಸಿದ್ಧಪಡಿಸುತ್ತಿದ್ದಾರೆ. ಈ ವರದಿ ತೋರಿಸಿ ಶಾಲೆ ತಪ್ಪಿಸಿಕೊಳ್ತಿದ್ದಾರೆ. ಈ ಬಗ್ಗೆ ಕೆಲವು ಟಿಕ್‌ಟಾಕ್ ವೀಡಿಯೊ ಬಹಿರಂಗವಾಗಿದೆ.
ವರದಿಯ ಪ್ರಕಾರ, ಮಕ್ಕಳು ಕೊರೊನಾ ಟೆಸ್ಟ್ ಕಿಟ್‌ಗೆ ನಿಂಬೆ ರಸ, ವಿನೆಗರ್ ಸುರಿಯುವ ಮೂಲಕ ವರದಿಯನ್ನು ಸಕಾರಾತ್ಮಕಗೊಳಿಸುತ್ತಿದ್ದಾರೆ. ರಾಪಿಡ್ ಡಯಾಗ್ನೋಸ್ಟಿಕ್ ಟೆಸ್ಟ್ ಸಮಯದಲ್ಲಿ ಯುಕೆ ಮಕ್ಕಳು ನಿಂಬೆ ರಸ ಅಥವಾ ಇತರ ದ್ರವಗಳನ್ನು ಬಳಸುತ್ತಿದ್ದಾರೆ. ವರದಿ ಸಕಾರಾತ್ಮಕವಾಗಿದೆ ಎಂಬುದನ್ನು ತೋರಿಸಿ ಶಾಲೆ ತಪ್ಪಿಸಿಕೊಳ್ತಿದ್ದಾರೆ.
ಇಂತಹ ವಿಡಿಯೊಗಳನ್ನು #fakecovidtest ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ಕೆಲ ವಿದ್ಯಾರ್ಥಿಗಳು ನಿಂಬೆ ರಸ, ಆಪಲ್ ಸಾಸ್, ಕೋಕಾ ಕೋಲಾ, ವಿನೆಗರ್ ಮತ್ತು ಹ್ಯಾಂಡ್ ಸ್ಯಾನಿಟೈಜರ್ ಬಳಸಿ ಕ್ಷಿಪ್ರ ಆಂಟಿಜೆನ್ ಪರೀಕ್ಷೆಯನ್ನು ಮಾಡುತ್ತಿದ್ದಾರೆ. ಇದನ್ನು ಪತ್ತೆ ಮಾಡಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಶಾಲೆಗಳು ತಿಳಿಸಿವೆ.