ಮುಂಬೈ: ಮುಂಬೈನ ವರ್ಸೋವಾ ಪ್ರದೇಶದ ಅಪಾರ್ಟ್ಮೆಂಟ್ ನಲ್ಲಿ 16 ವರ್ಷದ ಬಾಲಕಿಳು ಆರನೇ ಮಹಡಿಯಿಂದ ಇಳಿದು ಪರಾರಿಯಾಗುವ ಪ್ರಯತ್ನದಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾಳೆ.
ಸೀರೆಗಳನ್ನು ಹಗ್ಗದ ರೀತಿ ಕಟ್ಟಿ ಅದನ್ನು ಹಿಡಿದುಕೊಂಡು ಕೆಳಗಿಳಿಯುವಾಗ ಹಿಡಿತ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಬೆನ್ನುಮೂಳೆಗೆ ಪೆಟ್ಟಾಗಿದ್ದು, ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.
16 ವರ್ಷದ ಬಾಲಕಿ ಪ್ರಿಯಕರನೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಪೋಷಕರಿಗೆ ಸಿಕ್ಕಿಬಿದ್ದಿದ್ದಾಳೆ. ಇದರಿಂದ ಭಯಗೊಂಡ ಆಕೆ ಮನೆಯಿಂದ ಪರಾರಿಯಾಗಲು ಯತ್ನಿಸಿದ್ದು, ಮಹಡಿಯಿಂದ ಕೆಳಗೆ ಸೀರೆಗಳನ್ನು ಕಟ್ಟಿ ಹಗ್ಗದ ರೀತಿ ಇಳಿಬಿಟ್ಟಿದ್ದಾಳೆ. ಅದನ್ನು ಹಿಡಿದುಕೊಂಡು ಇಳಿಯುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ.