ಜಗತ್ತಿನಲ್ಲಿ ಎರಡೇ ಲಿಂಗಗಳು ಇರುವುದು ಎಂದು ಹೇಳಿ ಶಾಲೆಯಿಂದ ಶಿಸ್ತಿನ ಕ್ರಮ ಎದುರಿಸಿದ ಕಾರಣಕ್ಕೆ ಟೀನೇಜ್ ವಿದ್ಯಾರ್ಥಿಯೊಬ್ಬ ತನ್ನ ಶಾಲಾಡಳಿತದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾನೆ.
ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ನ ಎಕ್ಸೆಟರ್ ಪ್ರೌಢಶಾಲೆಯ ವಿದ್ಯಾರ್ಥಿಯಾದ ಈತ ನವೆಂಬರ್ 4ರಂದು ಕೋರ್ಟ್‌ನಲ್ಲಿ ದಾವೆಯಲ್ಲಿ; ತನ್ನ ಸ್ನೇಹಿತನೊಂದಿಗೆ ನಡೆಸಿದ ನಂವಹನವೊಂದರ ವೇಳೆ ’ಇರುವುದು ಎರಡೇ ಲಿಂಗ’ ಎಂದು ಹೇಳಿದ ಕಾರಣಕ್ಕೆ ತನ್ನ ಶಾಲೆಯ ಫುಟ್ಬಾಲ್ ತಂಡದಿಂದ ಒಂದು ಪಂದ್ಯದ ಮಟ್ಟಿಗೆ ಹೊರಗೆ ಹಾಕಲಾಗಿತ್ತು ಎಂದಿದ್ದಾನೆ.
ಪರಿಷತ್ ಚುನಾವಣೆ: ಸಂಜೆ ಅಥವಾ ನಾಳೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ನ್ಯೂ ಹ್ಯಾಂಪ್‌ಶೈರ್‌ನ ಹಕ್ಕುಗಳ ಕಾಯಿದೆಯನ್ನು ತನ್ನ ಶಾಲಾಡಳಿತ ಉಲ್ಲಂಘಿಸಿದ್ದು, ಸಾಂವಿಧಾನಿಕವಾಗಿ ತನಗೆ ಸಿಕ್ಕ ವಾಕ್‌ಸ್ವಾತಂತ್ರ‍್ಯವನ್ನು ಈ ಕ್ರಮದ ಮೂಲಕ ಕಿತ್ತುಕೊಂಡಂತಾಗಿದೆ ಎಂದು ವಿದ್ಯಾರ್ಥಿ ಆಗ್ರಹಿಸಿದ್ದಾನೆ.
ವಿದ್ಯಾರ್ಥಿಗಳಿಗೆ ತಮ್ಮ ಹೆಸರು ಹಾಗೂ ತಮ್ಮ ಲಿಂಗಾನುಸಾರ ಸರ್ವನಾಮಪದದ ಮೂಲಕ ಕರೆಯಿಸಿಕೊಳ್ಳುವ ಹಕ್ಕಿದೆ ಎಂದು ಶಾಲೆಯ ನೀತಿಯಲ್ಲಿ ತಿಳಿಸಲಾಗಿದೆ. ಆದರೆ ಶಾಲೆಯ ಈ ಕ್ರಮವು ಶಾಸನಾತ್ಮಕವಾಗಿ ಕೊಡಮಾಡಿರುವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕ್ಯಾಥೋಲಿಕ್ ಆಗಿರುವ ಕಾರಣ ವಿದ್ಯಾರ್ಥಿಯನ್ನು ಹೀಗೆ ಗುರಿಯಾಗಿಸಿಕೊಳ್ಳಲಾಗಿದೆ ಎಂದು ಕೋರ್ಟ್‌ಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಲಾಗಿದೆ.