ಮಧ್ಯಪ್ರದೇಶದ ಗ್ವಾಲಿಯರ್‌ನ 16 ವರ್ಷದ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಉತ್ತಮ ಡ್ಯಾನ್ಸರ್ ಆಗಲು ವಿಫಲನಾಗಿದ್ದಕ್ಕೆ ಹೀಗೆ ಮಾಡಿಕೊಂಡಿದ್ದಾನೆ. ಡೆತ್ ನೋಟ್ ನಲ್ಲಿ ಒಂದು ಮ್ಯೂಸಿಕ್ ವಿಡಿಯೋ ನಿರ್ಮಿಸುವ ತನ್ನ ಕೊನೆಯ ಆಸೆಯನ್ನು ಈಡೇರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ವಿನಂತಿಸಿದ್ದಾನೆ.
ಹಾಡನ್ನು ಖ್ಯಾತ ಗಾಯಕ ಅರಿಜಿತ್ ಸಿಂಗ್ ಹಾಡಬೇಕು. ನೇಪಾಳಿ ಕಲಾವಿದ ಸುಶಾಂತ್ ಖಾತ್ರಿ ನೃತ್ಯವನ್ನು ಸಂಯೋಜಿಸಬೇಕು ಎಂದು ಕೋರಿಕೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಗ್ವಾಲಿಯರ್ ನಗರದ ಕ್ಯಾನ್ಸರ್ ಆಸ್ಪತ್ರೆ ಪ್ರದೇಶದ ನಿವಾಸಿಯಾಗಿರುವ 11 ನೇ ತರಗತಿಯ ವಿದ್ಯಾರ್ಥಿ ಭಾನುವಾರ ರಾತ್ರಿ ರೈಲ್ವೇ ಟ್ರ್ಯಾಕ್ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಝಾನ್ಸಿ ರೋಡ್ ಪೊಲೀಸ್ ಠಾಣೆಯ ಪ್ರಭಾರಿ ಸಂಜೀವ್ ನಯನ ಶರ್ಮಾ ತಿಳಿಸಿದ್ದಾರೆ.
ಆ ಹುಡುಗ ಬರೆದಿರುವ ಡೆತ್ ನೋಟ್ ಆತನ ಜೇಬಿನಲ್ಲಿ ಪತ್ತೆಯಾಗಿದ್ದು, ಅದರಲ್ಲಿ ಆತನ ಕುಟುಂಬ ಮತ್ತು ಸ್ನೇಹಿತರು ಬೆಂಬಲ ನೀಡದ ಕಾರಣ ಉತ್ತಮ ಡ್ಯಾನ್ಸರ್ ಆಗಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾನೆ.
ಆತ್ಮಹತ್ಯೆಗೆ ಮೊದಲು ಡೆತ್ ನೋಟ್ ಬರೆದಿಟ್ಟಿದ್ದು, ಟಿಪ್ಪಣಿಯಲ್ಲಿ ತನ್ನ ನಿಧನದ ನಂತರ ಮ್ಯೂಸಿಕ್ ವಿಡಿಯೋ ಮಾಡಬೇಕು. ಅರಿಜಿತ್ ಸಿಂಗ್ ಹಾಡನ್ನು ಹಾಡಬೇಕು. ನೇಪಾಳಿ ಕಲಾವಿದ ಸುಶಾಂತ್ ಖತ್ರಿ ನೃತ್ಯ ಸಂಯೋಜಿಸಬೇಕು ಎಂದು ಕೋರಿದ್ದಾನೆ. ಟಿಪ್ಪಣಿಯೊಂದಿಗೆ ಈ ಸಂಗೀತದ ವಿಡಿಯೋ ಸಿದ್ಧಪಡಿಸಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕೊನೆಯ ಆಸೆಯನ್ನು ಪೂರ್ಣಗೊಳಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಒತ್ತಾಯಿಸಿದ್ದಾನೆ ಎಂದು ಶರ್ಮಾ ಹೇಳಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.