ಅಗರ್ತಲಾ: ಬಾಲಕನೊಬ್ಬ ತನ್ನ ಕುಟುಂಬದ ನಾಲ್ವರನ್ನು ಕೊಂದಿರುವ ಭೀಕರ ಘಟನೆ ತ್ರಿಪುರಾದ ಧಲೈ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಪೊಲೀಸರ ಪ್ರಕಾರ, ಶನಿವಾರ ತಡರಾತ್ರಿ ಸಂತ್ರಸ್ತರು ಮಲಗಿದ್ದಾಗ ಕೊಡಲಿಯಿಂದ ಅಜ್ಜ(70), ತಾಯಿ (32), 10 ವರ್ಷದ ಸಹೋದರಿ, ಚಿಕ್ಕಮ್ಮ(42) ಅವರನ್ನು ಬಾಲಕ ಕೊಂದಿದ್ದಾನೆ.
ನಾಲ್ವರನ್ನು ಕೊಂದ ನಂತರ, ಅವರ ಶವಗಳನ್ನು ಅವರ ಮನೆಯ ಹಿಂದೆ ನಿರ್ಮಾಣ ಹಂತದಲ್ಲಿದ್ದ ಸೆಪ್ಟಿಕ್ ಟ್ಯಾಂಕ್ ನಲ್ಲಿ ಹಾಕಿದ್ದಾನೆ. ಬಾಲಕನ ತಂದೆ ಹರದನ್ ದೇಬನಾಥ್(ಬಸ್ ಕಂಡಕ್ಟರ್) ಮಧ್ಯರಾತ್ರಿಯ ನಂತರ ಮನೆಗೆ ಹಿಂದಿರುಗಿದ ನಂತರ ರಕ್ತ ನೋಡಿ ನೆರೆಹೊರೆಯವರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಅಧಿಕಾರಿ ಹೇಳಿದರು.
ಹುಡುಗ ಆನ್‌ಲೈನ್ ಗೇಮಿಂಗ್ ವ್ಯಸನಿಯಾಗಿದ್ದಾನೆ. ಇದರಿಂದಾಗಿ ಅವನು ತನ್ನ ಮನೆಯಿಂದ ಹಣ ಕದ್ದಿದ್ದಾನೆ. ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ. ಈ ಕೃತ್ಯದ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಕೃತ್ಯದಲ್ಲಿ ಇತರರು ಭಾಗಿಯಾಗಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯ ಹೊರಗಿನ ಹೊಂಡದಲ್ಲಿ 4 ಮೃತದೇಹಗಳು ಪತ್ತೆಯಾಗಿವೆ. ಮೃತರಲ್ಲಿ 3 ಮಹಿಳೆಯರು ಮತ್ತು ಒಬ್ಬ ಪುರುಷನಾಗಿದ್ದು, ಎಲ್ಲರೂ ಒಂದೇ ಕುಟುಂಬದವರು. ಆರೋಪಿ ಅಪ್ರಾಪ್ತ ವಯಸ್ಕನಾಗಿದ್ದು, ಅದೇ ಕುಟುಂಬಕ್ಕೆ ಸೇರಿದವನಾಗಿದ್ದಾನೆ. ಆತನನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಕಮಲಾಪುರ ಎಸ್‌ಡಿಪಿಒ ರಮೇಶ್ ಯಾದವ್ ತಿಳಿಸಿದ್ದಾರೆ.