ಆನ್ಲೈನ್ ಲೋಕದ ದಿಗ್ಗಜ ಅಮೆಜ಼ಾನ್‌ನ ಸ್ಥಾಪಕ ಜೆಫ್ ಬೆಜ಼ೋಸ್ ಜೊತೆಗೆ ಬಾಹ್ಯಾಕಾಶಕ್ಕೆ ತೆರಳಿದ್ದ 18 ವರ್ಷದ ಡಚ್ ಪ್ರಯಾಣಿಕ ಒಲಿವರ್ ಡೇಮೆನ್ ಆಸಕ್ತಿಕರ ವಿಷಯವೊಂದನ್ನು ಬೆಜ಼ೋಸ್ ಜೊತೆಗೆ ಹಂಚಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
“ಅಮೆಜ಼ಾನ್‌ನಿಂದ ನಾನು ಏನನ್ನೂ ಖರೀದಿ ಮಾಡಿಲ್ಲ ಎಂದು ನಾನು ಜೆಫ್‌ಗೆ ಹೇಳಿದೆ” ಎಂದು ಬಾಹ್ಯಾಕಾಶಕ್ಕೆ ತೆರಳಿದ ಅತ್ಯಂತ ಕಿರಿಯ ಪ್ರಯಾಣಿಕ ಎಂಬ ಶ್ರೇಯಕ್ಕೆ ಪಾತ್ರನಾದ ಒಲಿವರ್ ತಿಳಿಸಿದ್ದಾರೆ.
“ಇದಕ್ಕೆ ಪ್ರತಿಕ್ರಿಯಿಸಿದ ಜೆಫ್, ಈ ರೀತಿ ವ್ಯಕ್ತಿಯೊಬ್ಬರು ಹೇಳುವುದನ್ನು ಕೇಳಿ ಬಹಳ ದಿನಗಳಾಗಿವೆ ಎಂದು ಅವರು ತಿಳಿಸಿದರು” ಎಂದು ಬೆಜ಼ೋಸ್ ಪ್ರತಿಕ್ರಿಯೆ ಕುರಿತಂತೆ ಒಲಿವರ್ ತಿಳಿಸಿದ್ದಾರೆ.
BIG BREAKING: 39,742 ಜನರಿಗೆ ಸೋಂಕು, 535 ಜನ ಸಾವು
ಬಾಹ್ಯಾಕಾಶಕ್ಕೆ ತೆರಳಲು ಹರಾಜಿನಲ್ಲಿ $28 ದಶಲಕ್ಷ ಪಾವತಿ ಮಾಡಿದ್ದ ವ್ಯಕ್ತಿ, ಈ ಟ್ರಿಪ್ ಆರಂಭಗೊಂಡ ವೇಳೆ ಇಟಲಿಯಲ್ಲಿ ಫ್ಯಾಮಿಲಿ ಟ್ರಿಪ್‌ನಲ್ಲಿದ್ದ ಕಾರಣ ಈ ಟೀನೇಜರ್‌ನನ್ನು ಆರಿಸಿಕೊಳ್ಳಲಾಗಿತ್ತು.
“ರಾಕೆಟ್‌ನಲ್ಲಿ ಕೂರುವವರೆಗೂ ನನಗೆ ಈ ಬಗ್ಗೆ ಗೊತ್ತೇ ಇರಲಿಲ್ಲ. ಇದೊಂದು ಸೂಪರ್ ಕೂಲ್ ಅನುಭವ. ತೂಕರಹಿತವಾಗಿರುವುದು ಒಂದು ರೀತಿಯ ವಿಚಿತ್ರ ಅನುಭವ. ನೀರಿನಲ್ಲಿ ತೇಲಿದಂತೆ ಅನಿಸುತ್ತಿತ್ತು” ಎಂದು ತನ್ನ ಬಾಹ್ಯಾಕಾಶ ಟ್ರಿಪ್ ಬಗ್ಗೆ ಮಾತನಾಡಿದ ಒಲಿವರ್, “$28 ದಶಲಕ್ಷಕ್ಕೆ ಹತ್ತಿರವಾದ ಮೊತ್ತವನ್ನೂ ನಾವು ಪಾವತಿ ಮಾಡಿಲ್ಲ. ಆದರೆ ನಾನು ಅತ್ಯಂತ ಕಿರಿಯ ಅಭ್ಯರ್ಥಿಯಾಗಿದ್ದ ಕಾರಣ ಅವರು ನನ್ನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೇ ನಾನೂ ಸಹ ಪೈಲಟ್ ಆಗಿದ್ದ ಕಾರಣ ಈ ಬಗ್ಗೆ ಮುಂಚೆಯೇ ಒಂದಷ್ಟು ತಿಳಿದಿದ್ದೂ ಕೆಲಸಕ್ಕೆ ಬಂದಿದೆ” ಎಂದು ಈ ಟ್ರಿಪ್‌ಗೆ ತಾನು ಹೇಗೆ ಆಯ್ಕೆಯಾದೆ ಎಂದು ಹಂಚಿಕೊಂಡಿದ್ದಾರೆ.