ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಸಂಖ್ಯೆ ಹೆಚ್ಚಾಗ್ತಿದೆ. ಜಿಮ್ ಮಾಡ್ತಾ, ಡಾನ್ಸ್ ಮಾಡ್ತಾ, ವ್ಯಾಯಾಮ ಮಾಡ್ತಾ ಜನರು ಹೃದಯಾಘಾತಕ್ಕೊಳಗಾಗ್ತಿದ್ದಾರೆ. ಗುಜರಾತಿನ ಜಾಮ್‌ನಗರದಲ್ಲಿ ಇಂತಹದ್ದೇ ಘಟನೆ ನಡೆದಿದೆ. ಜಿಮ್ ನಲ್ಲಿ ವ್ಯಾಯಾಮ ಮಾಡ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಹೃದಯಾಘಾತವಾಗಿದೆ. ಅಲ್ಲಿಯೇ ಕುಸಿದು ಬಿದ್ದು ಆತ ಸಾವನ್ನಪ್ಪಿದ್ದಾನೆ.
19 ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಕಿಶನ್ ಮಾಣೆಕ್ ಗೆ ಹೃದಯಾಘಾತವಾಗಿದೆ. ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಆತ ಸಾವನ್ನಪ್ಪಿದ್ದಾನೆ. ಪಿಜಿವಿಸಿಎಲ್‌ನಲ್ಲಿ ಡೆಪ್ಯೂಟಿ ಇಂಜಿನಿಯರ್ ಆಗಿದ್ದ ಹೇಮಂತ್ ಮಾಣೆಕ್ ಅವರ ಪುತ್ರ ಕಿಶನ್ ವ್ಯಾಯಾಮ ಮಾಡುವಾಗ ಕುಸಿದು ಬಿದ್ದಿದ್ದಾನೆ.
ಜಿಮ್‌ನ ಸಿಸಿಟಿವಿ ದೃಶ್ಯಾವಳಿಗಳು ಕಿಶನ್ ನೆಲಕ್ಕೆ ಬಿದ್ದ ಕ್ಷಣವನ್ನು ಸೆರೆಹಿಡಿದಿದೆ. ತಕ್ಷಣ ಜಿಮ್ ಸಿಬ್ಬಂದಿ ಅವನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸತತ ಪ್ರಯತ್ನ ನಡೆಸಿದ್ರೂ ಆತನನ್ನು ಉಳಿಸಲು ಸಾಧ್ಯವಾಗ್ಲಿಲ್ಲ ಎಂದು ಮೂಲಗಳು ತಿಳಿಸಿವೆ.