alex Certify ಇನ್‌ಸ್ಟಾಗ್ರಾಂ ಸ್ಟೇಟಸ್‌ ವಿಚಾರಕ್ಕೆ ನಡುರಸ್ತೆಯಲ್ಲೇ ಬಾಲಕರ ಫೈಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್‌ಸ್ಟಾಗ್ರಾಂ ಸ್ಟೇಟಸ್‌ ವಿಚಾರಕ್ಕೆ ನಡುರಸ್ತೆಯಲ್ಲೇ ಬಾಲಕರ ಫೈಟ್

ಪುಣೆ: ಇನ್‌ಸ್ಟಾಗ್ರಾಂನ ಸ್ಟೇಟಸ್‌ ವಿಚಾರವಾಗಿ ಹದಿಹರೆಯದವರ ನಡುವೆ ಗಲಾಟೆ ಸಂಭವಿಸಿದೆ. ಇದು ವಿಕೋಪಕ್ಕೆ ತಿರುಗಿ ಚೂಪಾದ ಆಯುಧಗಳಿಂದ ಹದಿನಾರು ವರ್ಷದ ಬಾಲಕನ ಮೇಲೆ ಹಲ್ಲೆ ಆಗಿದೆ. ಈ ಪ್ರಕರಣ ಸಂಬಂಧ ಮೂವರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪುಣೆ ಸಿಟಿ ಪೊಲೀಸರು ತಿಳಿಸಿದ್ದಾರೆ.

ವಡ್ಗಾಂವ್‌ ಬುದ್ರುಕ್‌ನಲ್ಲಿ ಭಾನುವಾರ ಸಂಜೆ ಈ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಬಾಲಕ ಹಾಕಿದ ಇನ್‌ಸ್ಟಾಗ್ರಾಂ ಸ್ಟೇಟಸ್‌ ಹಲ್ಲೆ ಮಾಡಿದ ಮೂವರು ಬಾಲಕರಲ್ಲಿ ತೀವ್ರ ಅಸಮಾಧಾನ ಉಂಟುಮಾಡಿತ್ತು. ಹೀಗಾಗಿ, ಅವರು ಕ್ರುದ್ಧರಾಗಿದ್ದರು.

ಹಲ್ಲೆಗೊಳಗಾದ ಬಾಲಕ ಭಾನುವಾರ ಸಂಜೆ 4 ಗಂಟೆಗೆ ಎಟಿಎಂನಿಂದ ಹಣ ವಿತ್‌ಡ್ರಾ ಮಾಡಲು ತೆರಳಿದ್ದ. ಇದೇ ವೇಳೆ ಅಸಮಾಧಾನಗೊಂಡಿದ್ದ ಬಾಲಕರ ಗುಂಪು ಹರಿತ ಆಯುಧಗಳೊಂದಿಗೆ ಈ ಬಾಲಕನ ಮೇಲೆ ಹಲ್ಲೆ ಮಾಡಿದೆ.

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಇಳಿಕೆ; ಸಾವಿನ ಸಂಖ್ಯೆಯಲ್ಲೂ ಕುಸಿತ

ಬಾಲಕನ ಮೇಲೆ ಹಲ್ಲೆ ನಡೆಸುತ್ತಿದ್ದ ಗುಂಪು, ಆತನ ರಕ್ಷಣೆಗೆ ಸಾರ್ವಜನಿಕರು ಧಾವಿಸದಂತೆ ತಡೆಯಲು ಗಾಳಿಯಲ್ಲಿ ಆ ಆಯುಧಗಳನ್ನು ಬೀಸುತ್ತಿತ್ತು. ಅಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಈ ಬಗ್ಗೆ ದೂರು ದಾಖಲಿಸಿಕೊಂಡು, ಕೂಡಲೇ ಹಲ್ಲೆಕೋರ ಬಾಲಕರನ್ನು ಬಂಧಿಸಲು ಪೊಲೀಸರು ಶೋಧ ನಡೆಸಿದರು. ಮೂವರು ಬಾಲಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...