ಜರ್ಮನ್ ಬೈಕ್ ತಯಾರಕ ಕಂಪನಿಯಾದ Canyon ರಸ್ತೆ ಅಪಘಾತಗಳನ್ನು ತಡೆಯುವ ಸಲುವಾಗಿ 2026ರ ಅಂತ್ಯದ ವೇಳೆಗೆ ವಿ 2ಎಕ್ಸ್ ತಂತ್ರಜ್ಞಾನವನ್ನು ತರಲು ಯೋಜನೆ ರೂಪಿಸಿದೆ.
ಕ್ಯಾನ್ಯನ್ ಕಂಪನಿಯು ಇಂತಹದ್ದೊಂದು ಘೋಷಣೆ ಮಾಡಿದ ಮೊದಲ ಬೈಸಿಕಲ್ ಕಂಪನಿ ಎನಿಸಿದೆ. ಆದರೆ ಈ ತಂತ್ರಜ್ಞಾನ ಸಂಪೂರ್ಣವಾಗಿ ಅನುಷ್ಠಾನಗೊಳ್ಳಲು ಹಲವು ವರ್ಷಗಳು ಬೇಕಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ಕಾಯಬೇಕಿದೆ.
ವಿ 2 ಎಕ್ಸ್ ತಂತ್ರಜ್ಞಾನವು ವಾಹನಗಳಿಗೆ ಪರಸ್ಪರ ಸಂವಹನ ನಡೆಸಲು ಹಾಗೂ ಸಂಭಾವ್ಯ ಅಪಾಯದ ಸಂದರ್ಭಗಳಲ್ಲಿ ಮುಂಚಿತವಾಗಿ ಎಚ್ಚರಿಕೆಯನ್ನು ನೀಡುವ ಸಾಮರ್ಥ್ಯವನ್ನು ಕೊಡುತ್ತದೆ.
ಅಂದರೆ ಬೈಸಿಕಲ್ನ್ನು ಹಾದು ಹೋಗುವ ಯಾವುದೇ ಕಾರು ಅಥವಾ ಟ್ರಕ್ಗಳು ಇದೇ ತಂತ್ರಜ್ಞಾನವನ್ನು ಹೊಂದಿದ್ದರೆ ಈ ಎಚ್ಚರಿಕೆಯ ಸಂದೇಶವನ್ನು ಸೈಕ್ಲಿಸ್ಟ್ ಗೆ ತಿಳಿಸಬಹುದಾಗಿದೆ.
ಇಂತಹ ಸಂದರ್ಭಗಳು ಆಗಾಗ್ಗೆ ಸಂಭವಿಸಬಹುದು, ಕಾರು ತನ್ನ ಲೇನ್ನಿಂದ ಹೊರಬಂದಾಗ ಅಥವಾ ಸೈಕ್ಲಿಸ್ಟ್ ಇನ್ನೇನು ಅಪಘಾತಕ್ಕೆ ಸಿಲುಕುತ್ತಾನೆ ಎಂಬ ಸಂದರ್ಭ ಎದುರಾದಾಗ ಇದು ಚಾಲಕ ಅಥವಾ ಸೈಕಲ್ ಸವಾರನಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತದೆ. ಅಲ್ಲದೇ ವಾಹನದ ವೇಗವನ್ನು ಸ್ವಯಂಚಾಲಿತವಾಗಿ ಕಡಿಮೆ ಮಾಡುತ್ತದೆ. ಇದರಿಂದ ರಸ್ತೆ ಅಪಘಾತಗಳನ್ನು ತಡೆಗಟ್ಟುವುದು ಸುಲಭವಾಗುತ್ತದೆ.