ಬೆಂಗಳೂರು: ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಅವರ ಪತ್ನಿ ಸೇರಿ ಮೂವರಿಗೆ ಜಾಮೀನು ಮಂಜೂರಾಗಿದೆ.
ಅತುಲ್ ಸುಭಾಷ್ ಪತ್ನಿ ನಿಖಿತಾ ಸೇರಿ ಮೂವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಬೆಂಗಳೂರಿನ 29 ನೇ ಸಿಸಿಹೆಚ್ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಪತ್ನಿ ನಿಖಿತಾ, ಅತ್ತೆ ನಿಶಾ, ಬಾಮೈದ ಅನುರಾಗ್ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಬೆಂಗಳೂರಿನಲ್ಲಿ ನೆಲೆಸಿದ್ದು, ಡಿಸೆಂಬರ್ 9ರಂದು ಮಾರತಹಳ್ಳಿಯ ಮಂಜುನಾಥ ಲೇಔಟ್ ನಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿ, ಅತ್ತೆ ಮತ್ತು ಸಹೋದರ ಹಾಗೂ ಅವರ ಸಂಬಂಧಿ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದರು. ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿಖಿತಾ, ನಿಶಾ ಹಾಗೂ ಅನುರಾಗ್ ಅವರನ್ನು ಗುರುಗ್ರಾಮ್ ಹಾಗೂ ಪ್ರಯಾಗ್ ರಾಜ್ ನಲ್ಲಿ ಬಂಧಿಸಿದ್ದರು.