![](https://kannadadunia.com/wp-content/uploads/2023/10/78fefe3d-3b36-4fef-97a6-7ddde5d1440d-1024x579.jpg)
ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಮನುಷ್ಯ ಹಾಗೂ ಶ್ವಾನದ ಪ್ರೀತಿ ಬಾಂಧವ್ಯದ ಕುರಿತ ಸಿನಿಮಾಗಳು ಬರುತ್ತಲೇ ಇವೆ. ಇದೀಗ ‘ಯಾವ ಮೋಹನ ಮುರಳಿ ಕರೆಯಿತು’ ಎಂಬ ಚಿತ್ರ ಕೂಡ ಅದೇ ರೀತಿಯಲ್ಲಿ ಪ್ರೇಕ್ಷಕರ ಗಮನ ಸೆಳೆಯಲು ಬರುತ್ತಿದೆ. ನಿನ್ನೆಯಷ್ಟೇ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಸಾಕಷ್ಟು ವೀಕ್ಷಣೆ ಪಡೆದಿದೆ.
ವಿಶ್ವಾಸ್ ಕೃಷ್ಣ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಪ್ರಕೃತಿ ಶರಣ್, ಮಾಧವ, ವರುಣ್ ರಾಜು, ಸ್ವಪ್ನ ಶೆಟ್ಟಿಗಾರ್ ತೆರೆಹಂಚಿಕೊಂಡಿದ್ದು, ಪ್ರಕೃತಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಶರಣಪ್ಪ ಗೌರಮ್ಮ ನಿರ್ಮಾಣ ಮಾಡಿದ್ದಾರೆ. ಅನಿಲ್ ಸಿಜೆ ಸಂಗೀತ ಸಂಯೋಜನೆ ನೀಡಿದ್ದಾರೆ.