ಸ್ಯಾಂಡಲ್ವುಡ್ನ ಪ್ರತಿಭಾವಂತ ನಟ ಹರೀಶ್ ರಾಜ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ವೆಂಕಟೇಶಾಯ ನಮಃ’ ಚಿತ್ರದ ಟೀಸರ್ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಟೀಸರ್ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದ್ದು, ನೋಡುಗರ ಗಮನ ಸೆಳೆದಿದೆ.
ಶ್ರೀ ಲಕ್ಷ್ಮಿ ಜನಾರ್ಧನ ಮೂವೀಸ್ ಬ್ಯಾನರ್ ನಲ್ಲಿ ಜನಾರ್ಧನ ಪಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಹರೀಶ್ ರಾಜ್ ಸೇರಿದಂತೆ ಪ್ರಕೃತಿ, ತಬಲಾ ನಾಣಿ, ಅಶೋಕ್ ತೆರೆ ಹಂಚಿಕೊಂಡಿದ್ದಾರೆ. ಪ್ರವೀಣ್ ಶ್ರೀನಿವಾಸ ಮೂರ್ತಿ ಸಂಗೀತ ಸಂಯೋಜನೆ ನೀಡಿದ್ದು, ಜೀವನ್ ಪ್ರಕಾಶ್ ಸಂಕಲನ, ರಾಜ ಶಿವಶಂಕರ್ ಛಾಯಾಗ್ರಹಣವಿದೆ.