ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ವಿಕಾಶ್ ಉತಯ್ಯ ಅಭಿನಯದ ‘ಅಪಾಯವಿದೆ ಎಚ್ಚರಿಕೆ’ ಚಿತ್ರದ ಟೀಸರ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಟೀಸರ್ ನೋಡುಗರ ಗಮನ ಸೆಳೆಯುವುದಲ್ಲದೆ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದೆ.
ಈ ಚಿತ್ರವನ್ನು ಯಶಸ್ವಿನಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ವಿಜಿ ಮಂಜುನಾಥ್ ಮತ್ತು ಪೂರ್ಣಿಮಾ ಎಂ ಗೌಡ ನಿರ್ಮಾಣ ಮಾಡಿದ್ದು, ವಿಕಾಶ್ ಉತಯ್ಯ ಸೇರಿದಂತೆ ರಾಧಾ ಭಗವತಿ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ಹರಿಣಿ ಶ್ರೀಕಾಂತ್, ಅಶ್ವಿನ್ ಹಾಸನ್ ಬಣ್ಣ ಹಚ್ಚಿದ್ದಾರೆ. ಸುನಾದ್ ಗೌತಮ್ ಅವರ ಸಂಗೀತ ಹಾಗೂ ಛಾಯಾಗ್ರಹಣವಿದ್ದು, ಅಭಿಜಿತ್ ತೀರ್ಥಹಳ್ಳಿ ಸಂಭಾಷಣೆ, ಹರ್ಷಿತ್ ಪ್ರಭು ಅವರ ಸಂಕಲನವಿದೆ.