![](https://kannadadunia.com/wp-content/uploads/2024/03/e481f6cb-8e20-409c-8fa8-223ba417dca9-1024x585.jpg)
ಈಗಾಗಲೇ ತನ್ನ ಟೈಟಲ್ಲಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಮಂಜು ಕವಿ ನಿರ್ದೇಶನದ ‘ಮಿಸ್ ಗೈಡ್’ ಚಿತ್ರದ ಟೀಸರ್ ನಿನ್ನೆ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟೀಸರ್ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದಿದ್ದು, ಹೊಸಬರ ಈ ಪ್ರಯತ್ನಕ್ಕೆ ನೋಡುಗರಿಂದ ಮೆಚ್ಚುಗೆ ದೊರೆತಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಈ ಚಿತ್ರದಲ್ಲಿ ಸುಬ್ಬು, ನಿತೀಶ್, ವಿನಯ್ ರಾಜ್, ಫಾರಿನ್ ಅಬೀಬ್, ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಸುಬ್ಬು ನಾಗರಾಜ್ ನಿರ್ಮಾಣ ಮಾಡಿದ್ದು, ನಿರ್ದೇಶಕ ಮಂಜು ಕವಿ ಸಂಗೀತ ಸಂಯೋಜನೆ ನೀಡಿದ್ದಾರೆ. ವೆಂಕಿ ಸಂಕಲನವಿದೆ.