![](https://kannadadunia.com/wp-content/uploads/2024/02/fe2498fb-2082-4bd3-9caf-1cb1c754b6e2-1-1024x585.jpg)
ಅನೂಪ್ ಆಂಟೋನಿ ನಿರ್ದೇಶನದ ಶಶಿ ಅಭಿನಯದ ‘ಮೆಹಬೂಬಾ’ ಚಿತ್ರದ ಟೀಸರ್ ಇಂದು ಜನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ಬಿಗ್ ಬಾಸ್ ನಲ್ಲಿ ವಿಜೇತರಾಗಿದ್ದ ಹಲವಾರು ಸ್ಪರ್ಧಿಗಳು ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಈ ಟೀಸರ್ ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಶಶಿ, ಪಾವನ ಗೌಡ, ಕಬೀರ್ ದುಹಾನ್ ಸಿಂಗ್ ಪ್ರಮುಖ ಪಾತ್ರದಲ್ಲಿದ್ದು, ಶ್ರೀ ಬಾಲಾಜಿ ಮೋಶನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಟ ಶಶಿ ಅವರೇ ನಿರ್ಮಾಣ ಮಾಡಿದ್ದಾರೆ, ಕೆ ಎಂ ಪ್ರಕಾಶ್ ಸಂಕಲನ, ಕಿರಣ್ ಹಂಪಾಪುರ್ ಛಾಯಾಗ್ರಹಣ, ಮ್ಯಾಥ್ಯೂಸ್ ಮನು ಸಂಗೀತ ಸಂಯೋಜನೆ ನೀಡಿದ್ದಾರೆ. ಮುಂದಿನ ತಿಂಗಳು ಮಾರ್ಚ್ 15ರಂದು ಈ ಸಿನಿಮಾ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ.