![](https://kannadadunia.com/wp-content/uploads/2023/12/5e30c164-5768-4901-a600-c03e7ab1ce88-1024x632.jpg)
ಕೆಎಂ ರಘು ರಚಿಸಿ ನಿರ್ದೇಶಿಸಿರುವ ‘ಜಸ್ಟ್ ಪಾಸ್’ ಚಿತ್ರದ ಟೀಸರ್ ಡಿಸೆಂಬರ್ 13 ರಂದು ರಿಲೀಸ್ ಆಗಲಿದ್ದು ಚಿತ್ರ ತಂಡ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ gt world ಮಾಲ್ ನಲ್ಲಿ ಹಮ್ಮಿಕೊಂಡಿದೆ. ಈ ಚಿತ್ರದಲ್ಲಿ ಶ್ರೀ ಸೇರಿದಂತೆ ಪ್ರಣತಿ, ಅರ್ಪಿತ, ಡುಮ್ಮ ವಿಶ್ವಾಸ್, ನಿಖಿಲ್, ಗಗನ್, ಚಂದು ಶ್ರೀ, ಯಶಿಕಾ, ಅಭಿ ಸೇರಿದಂತೆ ರಂಗಾಯಣ ರಘು ಹಾಗೂ ಸಾಧು ಕೋಕಿಲ ಬಣ್ಣ ಹಚ್ಚಿದ್ದಾರೆ.
ರಾಯ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ಶ್ರೀಧರ್ ಕೆವಿ ಹಾಗೂ ಶಶಿಧರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಹರ್ಷವರ್ಧನ್ ಸಂಗೀತ ಯೋಜನೆ ನೀಡಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನವಿದ್ದು, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣವಿದೆ.
![](https://kannadadunia.com/wp-content/uploads/2023/12/8e6b8d79-c164-401e-9d60-4da837094f7d-400x592.jpg)