![](https://kannadadunia.com/wp-content/uploads/2024/01/a2bb3a83-d614-47ae-abb0-7391df06e43c-1024x703.jpg)
ಪೃಥ್ವಿ ಅಂಬಾರ್ ನಟನೆಯ ದೇವರಾಜ್ ಪೂಜಾರಿ ನಿರ್ದೇಶನದ ‘ಮತ್ಸ್ಯಗಂಧ’ ಸಿನಿಮಾ ಈಗಾಗಲೇ ತನ್ನ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮುಂದಿನ ತಿಂಗಳು ಫೆಬ್ರವರಿ 23ಕ್ಕೆ ರಾಜ್ಯದ್ಯಂತ ತೆರೆ ಕಾಣಲಿದೆ ಇದೀಗ ಮತ್ಸ್ಯಗಂಧ ಚಿತ್ರ ತಂಡ ಸಿನಿಪ್ರೇಕ್ಷಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ನಾಳೆ ಯೂಟ್ಯೂಬ್ ನಲ್ಲಿ ಸಂಜೆ 6 – 15ಕ್ಕೆ ಮತ್ಸ್ಯಗಂಧ ಟೀಸರ್ ಬಿಡುಗಡೆಯಾಗಲಿದೆ.
ಸಹ್ಯಾದ್ರಿ ಪ್ರೊಡಕ್ಷನ್ ಬ್ಯಾನರ್ ನಡಿ ವಿಶ್ವನಾಥ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಸೇರಿದಂತೆ ಪ್ರಶಾಂತ್ ಸಿದ್ಧಿ, ನಾಗರಾಜ್ ಬೈಂದೂರ್, ಅಶೋಕ್ ಹೆಗಡೆ, ಭಜರಂಗಿ ಲೋಕಿ, ಶರತ್ ಲೋಹಿತಾಶ್ವ, ಸತೀಶ್ ಚಂದ್ರ, ಧಿಶಾ ಶೆಟ್ಟಿ, ಅಂಜಲಿ ಪಾಂಡೆ, ಪ್ರತಿಮಾ ನಾಯಕ್, ಗೌತಮ್. ದೀಪಾ ಶ್ರೀನಿವಾಸ್ ಬಣ್ಣ ಹಚ್ಚಿದ್ದಾರೆ. ಶ್ರೀನಿವಾಸ್ ಸಂಕಲನ, ಪ್ರವೀಣ್ ಛಾಯಾಗ್ರಹಣ, ಹಾಗೂ ಪ್ರಶಾಂತ್ ಸಿದ್ದಿ ಸಂಗೀತವಿದೆ.
![](https://kannadadunia.com/wp-content/uploads/2024/01/2fb5a6b6-d63e-482f-9742-697234efb89e-400x659.jpg)