ನವದೆಹಲಿ: ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಮರಳಿದ ಆಟಗಾರರಿಗೆ ದೆಹಲಿಯಲ್ಲಿ ಅದ್ದೂರಿ ಸ್ವಾಗತ ನೀಡಲಾಗಿದೆ. ಟೀಮ್ ಇಂಡಿಯಾ ಆಟಗಾರರು ವಿಶ್ವಕಪ್ ನೊಂದಿಗೆ ತವರಿಗೆ ಮರಳಿದ್ದು, ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಟಗಾರರಿಗೆ ಅದ್ದೂರಿ ಸ್ವಾಗತ ನೀಡಿ ವಿಜಯೋತ್ಸವ ಆಚರಿಸಲಾಗಿದೆ.
ಈಗಾಗಲೇ ಬಿಸಿಸಿಐನಿಂದ 125 ಕೋಟಿ ರೂ. ಬಹುಮಾನ ಘೋಷಿಸಲಾಗಿದೆ. ಚಂಡಮಾರುತ ದಿಂದಾಗಿ ಬಾರ್ಬಡೋಸ್ ನಲ್ಲಿ ಟೀಮ್ ಇಂಡಿಯಾ ಆಟಗಾರರು ಉಳಿದುಕೊಂಡಿದ್ದರು. ದೆಹಲಿಯಲ್ಲಿ ಇಂದು ಬೆಳಗ್ಗೆ ಟೀಂ ಇಂಡಿಯಾ ಆಟಗಾರರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದು, ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ.
ನಂತರ ಮುಂಬೈಗೆ ತೆರಳಲ್ಲಿದ್ದು ತೆರೆದ ವಾಹನದಲ್ಲಿ ಆಟಗಾರರ ಮೆರವಣಿಗೆ ಅದ್ದೂರಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಜೂನ್ 29 ರಂದು, ಐಸಿಸಿ ಪುರುಷರ T20 ವಿಶ್ವಕಪ್ 2024 ಫೈನಲ್‌ನಲ್ಲಿ ಭಾರತವು ಬಾರ್ಬಡೋಸ್‌ನಲ್ಲಿ ಏಡೆನ್ ಮಾರ್ಕ್‌ರಾಮ್ ನೇತೃತ್ವದ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸಿತು.
ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಇತರ ಸದಸ್ಯರು ಬಾರ್ಬಡೋಸ್‌ನಿಂದ ಆಗಮಿಸಿದ್ದಾರೆ. ಜೂನ್ 30 ರಿಂದ ಬೆರಿಲ್ ಚಂಡಮಾರುತದ ಕಾರಣದಿಂದಾಗಿ ಆಗಮನ ವಿಳಂಬವಾಗಿತ್ತು.