alex Certify ಮೊದಲ ಬಾರಿ ಟಿ-20 ವಿಶ್ವಕಪ್ ಆಡಲಿದ್ದಾರೆ ಈ ಆಟಗಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಬಾರಿ ಟಿ-20 ವಿಶ್ವಕಪ್ ಆಡಲಿದ್ದಾರೆ ಈ ಆಟಗಾರರು

ಐಪಿಎಲ್ ಪಂದ್ಯಾವಳಿಗಳು ಅಂತಿಮ ಘಟಕ್ಕೆ ಬಂದು ನಿಂತಿವೆ. ಐಪಿಎಲ್ ಮುಗಿದ ತಕ್ಷಣ ಯುಎಇ ನೆಲದಲ್ಲಿ ಟಿ-20 ವಿಶ್ವಕಪ್ ಪಂದ್ಯ ನಡೆಯಲಿದೆ.

ಅಕ್ಟೋಬರ್ 17ರಿಂದ ಪಂದ್ಯಾವಳಿ ಶುರುವಾಗಲಿದೆ. ಟೀಂ ಇಂಡಿಯಾ ಪರವಾಗಿ ಇದೇ ಮೊದಲ ಬಾರಿ ಕೆಲ ಆಟಗಾರರು ಟಿ-20 ವಿಶ್ವಕಪ್ ಆಡಲಿದ್ದಾರೆ. ಹಾಗೆ ಕೆಲ ಆಟಗಾರರಿಗೆ ಅವಕಾಶ ಕೈತಪ್ಪಿದೆ.

ಶಿಖರ್ ಧವನ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್ ಮತ್ತು ಕುಲದೀಪ್ ಯಾದವ್ ಟಿ 20 ವಿಶ್ವಕಪ್ ನಿಂದ ಹೊರಗಿದ್ದಾರೆ. ಭಾರತದ 7 ಆಟಗಾರರು ಇದೇ ಮೊದಲ ಬಾರಿಗೆ ಟಿ 20 ವಿಶ್ವಕಪ್‌ನಲ್ಲಿ ಆಡ್ತಿದ್ದಾರೆ.

ಸೂರ್ಯಕುಮಾರ್ ಯಾದವ್ : ಟಿ 20 ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್, ಮೊದಲ ಬಾರಿಗೆ ಟಿ 20 ವಿಶ್ವಕಪ್ ಆಡುವ ಅವಕಾಶ ಸಿಕ್ಕಿದೆ. ಟಿ 20 ವಿಶ್ವಕಪ್ ತಂಡದಲ್ಲಿ, ಸೂರ್ಯಕುಮಾರ್ ಯಾದವ್ 5 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ.

ಇಶಾನ್ ಕಿಶನ್ : ಟೀಂ ಇಂಡಿಯಾದ ಯುವ ಆಟಗಾರ ಇಶಾನ್ ಕಿಶನ್ ಕೂಡ ಮೊದಲ ಬಾರಿ ಟಿ-20 ವಿಶ್ವಕಪ್ ಮೈದಾನಕ್ಕಿಳಿಯಲಿದ್ದಾರೆ. ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ನಿಂದ ಇಶಾನ್ ಎಲ್ಲರ ಗಮನ ಸೆಳೆದಿದ್ದಾರೆ.

ವರುಣ್ ಚಕ್ರವರ್ತಿ : ವರುಣ್ ಚಕ್ರವರ್ತಿಗೆ ಇದೇ ಮೊದಲ ಬಾರಿ ಅವಕಾಶ ಸಿಕ್ಕಿದೆ. ವರುಣ್ ಚಕ್ರವರ್ತಿ, ಸ್ಪಿನ್ನರ್ ಆಗಿದ್ದು, ಏಳು ರೀತಿಯಲ್ಲಿ ಬೌಲ್ ಮಾಡಬಲ್ಲರು. ಎದುರಾಳಿಯನ್ನು ಸುಲಭವಾಗಿ ಬಗ್ಗುಬಡಿಯಬಲ್ಲರು ಎಂಬ ನಿರೀಕ್ಷೆಯಿದೆ. 28 ಐಪಿಎಲ್ ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದಾರೆ.

ರಾಹುಲ್ ಚಹರ್ : 21 ವರ್ಷದ ಲೆಗ್ ಸ್ಪಿನ್ನರ್ ರಾಹುಲ್ ಚಹರ್, ಭರವಸೆಯ ಆಟಗಾರ. ರಾಹುಲ್ ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಶ್ರೀಲಂಕಾ ವಿರುದ್ಧ ಆಡಿದ ಟಿ 20 ಸರಣಿಯಲ್ಲಿ, ರಾಹುಲ್ ಚಹರ್ ತಮ್ಮ ಬೌಲಿಂಗ್ ಮೂಲಕ ಎಲ್ಲರನ್ನೂ ಆಕರ್ಷಿಸಿದ್ದರು.

ಅಕ್ಷರ್ ಪಟೇಲ್ : ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್, ತಂಡಕ್ಕೆ ಆಯ್ಕೆಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಯುಎಇ ಪಿಚ್‌ಗಳು ಸ್ಪಿನ್ನರ್‌ಗಳಿಗೆ ಸಹಾಯವಾಗಲಿವೆ. ಹಾಗಾಗಿ ಟೀಂ ಇಂಡಿಯಾಕ್ಕೆ ಅಕ್ಷರ್ ಪಟೇಲ್ ಆಯ್ಕೆಯಾಗಿದ್ದಾರೆ.

ರಿಷಭ್ ಪಂತ್ : ರಿಷಬ್ ಪಂತ್ ಕೂಡ  ಮೊದಲ ಬಾರಿ ಟಿ 20 ವಿಶ್ವಕಪ್‌ ಆಡಲಿದ್ದಾರೆ. ಸ್ಫೋಟಕ ಬ್ಯಾಟ್ಸ್ ಮೆನ್  ರಿಷಬ್ ಪಂತ್, ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಕೀಪಿಂಗ್ ಜವಾಬ್ದಾರಿ ರಿಷಭ್ ಪಂತ್ ಮೇಲಿದೆ.

ಕೆ ಎಲ್ ರಾಹುಲ್ : ಕೆ ಎಲ್ ರಾಹುಲ್‌, 2019 ರ ವಿಶ್ವಕಪ್ ಆಡಿದ್ದು, ಟಿ-20 ವಿಶ್ವಕಪ್ ಇದೇ ಮೊದಲ ಬಾರಿ ಆಡ್ತಿದ್ದಾರೆ. ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವ ರಾಹುಲ್ ಮೇಲೆ ಭರವಸೆ ಹೆಚ್ಚಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...