ಟಿ-20 ವಿಶ್ವಕಪ್ ನಲ್ಲಿ ಭಾರತ-ಪಾಕಿಸ್ತಾನ ಅಕ್ಟೋಬರ್ 24ರಂದು ಮೊದಲ ಬಾರಿ ಮೈದಾನಕ್ಕಿಳಿಯಲಿದೆ. ಎರಡೂ ತಂಡಗಳಿಗೆ ಇದು ಟಿ-20 ವಿಶ್ವಕಪ್ ನಲ್ಲಿ ಮೊದಲ ಪಂದ್ಯ. ಸೆಮಿಫೈನಲ್ ಪ್ರವೇಶ ಮಾಡುವ ಮೊದಲೇ ಭಾರತ 12 ಪಂದ್ಯಗಳನ್ನು ಆಡಬೇಕಿದೆ. ಸೂಪರ್-12ರಲ್ಲಿ ಭಾರತ ಯಾವ ಯಾವ ತಂಡದ ಜೊತೆ ಆಡಲಿದೆ ಎಂಬುದು ಫೈನಲ್ ಆಗಿದೆ.
ಹಣ ಹಂಚಿಕೆ ಆರೋಪ ಪ್ರೂವ್ ಮಾಡಿ ಎಂದ ಬಿಜೆಪಿ ನಾಯಕರಿಗೆ ಡಿಕೆಶಿ ಖಡಕ್ ಉತ್ತರ
ಭಾರತ ಸೂಪರ್ -12ನಲ್ಲಿ ಸ್ಕಾಟ್ಲೆಂಡ್ ಮತ್ತು ನಮೀಬಿಯಾ ಜೊತೆ ಕೂಡ ಆಡಲಿದೆ. ಅಕ್ಟೋಬರ್ 24ರಂದು ಭಾರತ-ಪಾಕಿಸ್ತಾನ ಮೊದಲ ಪಂದ್ಯ ನಡೆಯಲಿದೆ. ಅಕ್ಟೋಬರ್ 31ರಂದು ಭಾರತ – ನ್ಯೂಜಿಲ್ಯಾಂಡ್ ಪಂದ್ಯ ನಡೆಯಲಿದೆ. ನವೆಂಬರ್ 3ರಂದು ಭಾರತ ಮತ್ತು ಅಫ್ಘಾನಿಸ್ತಾನ ಪಂದ್ಯ ನಡೆಯಲಿದೆ. ನವೆಂಬರ್ 5ರಂದು ಭಾರತ ಮತ್ತು ಸ್ಕಾಟ್ಲೆಂಡ್ ಪಂದ್ಯ ನಡೆಯಲಿದೆ. ನವೆಂಬರ್ 8ರಂದು ಭಾರತ-ನಮೀಬಿಯಾ ಪಂದ್ಯ ನಡೆಯಲಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ನಮೀಬಿಯಾ, ಐರ್ಲ್ಯಾಂಡ್ ಸೋಲಿಸಿ ಸೂಪರ್ 12ನಲ್ಲಿ ಸ್ಥಾನ ಪಡೆದಿದೆ. ನಮೀಬಿಯಾಕ್ಕೆ ಇದು ಐತಿಹಾಸಿಕ ಗೆಲುವಾಗಿದೆ. ಯಾಕೆಂದ್ರೆ ಅದು ಭಾರತದಂತಹ ದೊಡ್ಡ ತಂಡದ ಜೊತೆ ಆಟವಾಡಲಿದೆ. ಭಾರತ ಮೊದಲ ಎರಡು ಪಂದ್ಯಗಳನ್ನು ದೊಡ್ಡ ತಂಡದ ಜೊತೆ ಆಡಲಿದೆ. ಈ ಬಾರಿ ಭಾರತ, ಗೆಲುವಿನ ತಂಡ ಎನ್ನಲಾಗ್ತಿದೆ.