ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಪೈಕಿ ತಂದೆಯಾದವರ ಪಟ್ಟಿಗೆ ಹೊಸದಾಗಿ ಎಂಟ್ರಿ ಕೊಟ್ಟಿರುವ ವೇಗಿ ಭುವನೇಶ್ವರ್ ಕುಮಾರ್, ಕಳೆದ ತಿಂಗಳು ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.
ಭುವನೇಶ್ವರ್ ಕುಮಾರ್ ಪತ್ನಿ ನೂಪರ್ ದೆಹಲಿಯ ಆಸ್ಪತ್ರೆಯೊಂದರಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ನವೆಂಬರ್ 24ರಂದು ದಂಪತಿ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ.
ಮಗು ಜನಿಸಿದ ಒಂದು ತಿಂಗಳ ಬಳಿಕ ಭುವನೇಶ್ವರ್ ತಮ್ಮ ಮುದ್ದು ಮಗಳ ಮೊದಲ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಮಗಳು ಹಾಗೂ ಪತ್ನಿ ಜೊತೆಗೆ ಇರುವ ತಮ್ಮ ಚಿತ್ರವನ್ನು ಭುವಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಪೋಸ್ಟ್ ವೈರಲ್ ಆಗಿದ್ದು, ಈಶ್ವರ್ ಪಾಂಡೆ, ಸುರೇಶ್ ರೈನಾ, ಕರ್ಣ್ ಶರ್ಮಾ ಸೇರಿದಂತೆ ಅನೇಕರಿಂದ ಮುದ್ದಾದ ಎಮೋಜಿಗಳ ಪ್ರತಿಕ್ರಿಯೆಗಳು ಬಂದಿವೆ.