ಕ್ರಿಕೆಟ್ ನಲ್ಲಿ ಬ್ಯಾಟ್ಸ್ ಮನ್ ಜೊತೆ ಬೌಲರ್ ಪಾತ್ರವೂ ಮಹತ್ವದ್ದು. ಬ್ಯಾಟ್ಸ್ ಮನ್ ರನ್ ಗಳಿಸಲು ಪ್ರಯತ್ನಿಸಿದ್ರೆ ಬೌಲರ್ ರನ್ ಕೊಡುವುದನ್ನು ತಡೆಯಬೇಕು. ಬ್ಯಾಟ್ಸ್ ಮನ್ ಗಳಂತೆ ಬೌಲರ್ ಗಳೂ ಕೆಲವೊಂದು ತಪ್ಪು ಮಾಡ್ತಾರೆ. ಅದ್ರಲ್ಲಿ ನೋ ಬಾಲ್ ಮತ್ತು ವೈಡ್ ಸೇರಿದೆ. ಬೌಲರ್ಸ್ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಬಾರಿ ನೋ ಬಾಲ್ ಹಾಕಿರುತ್ತಾರೆ. ಆದ್ರೆ ಭಾರತೀಯ ಬೌಲರ್ ಒಬ್ಬರು ವೃತ್ತಿ ಜೀವನದ 16 ವರ್ಷಗಳಲ್ಲಿ ಒಮ್ಮೆಯೂ ನೋ ಬಾಲ್ ಹಾಕಿಲ್ಲ.
ಯಸ್. ಈ ಆಟಗಾರ ಮತ್ತ್ಯಾರು ಅಲ್ಲ. ಎಲ್ಲರ ನೆಚ್ಚಿನ ಆಟಗಾರ ಕಪಿಲ್ ದೇವ್. ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಕಪಿಲ್ ದೇವ್, 1978 ರಿಂದ 1994 ರವರೆಗೆ 16 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದಾರೆ. ಈ ತಮ್ಮ ವೃತ್ತಿ ಜೀವನದಲ್ಲಿ ಒಂದೇ ಒಂದು ನೋ ಬಾಲ್ ಎಸೆಯಲಿಲ್ಲ. ವೃತ್ತಿ ಜೀವನದಲ್ಲಿ ಒಂದೇ ಒಂದು ನೋ ಬಾಲ್ ಹಾಕದೆ ದಾಖಲೆ ಮಾಡಿದ ಭಾರತದ ಏಕೈಕ ಬೌಲರ್ ಕಪಿಲ್ ದೇವ್.
ಕಪಿಲ್ ಭಾರತ ಪರ 131 ಟೆಸ್ಟ್ ಮತ್ತು 225 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್ ನಲ್ಲಿ 5248 ರನ್ ಮತ್ತು ಏಕದಿನ ಪಂದ್ಯದಲ್ಲಿ 3783 ರನ್ ಗಳಿಸಿದ್ದರು. ಹಾಗೆಯೇ ಟೆಸ್ಟ್ ನಲ್ಲಿ 434 ಹಾಗೂ ಏಕದಿನ ಪಂದ್ಯದಲ್ಲಿ 253 ವಿಕೆಟ್ ಪಡೆದಿದ್ದಾರೆ. ಕಪಿಲ್ ಅಲ್ಲದೆ ವಿಶ್ವದ ಇನ್ನೂ ನಾಲ್ಕು ಆಟಗಾರರು ತಮ್ಮ ವೃತ್ತಿ ಜೀವನದಲ್ಲಿ ನೋ ಬಾಲ್ ಎಸೆದಿಲ್ಲ.