2023ರ ಏಷ್ಯಾ ಕಪ್ ಪ್ರಶಸ್ತಿಯನ್ನು ಭಾರತ ತಂಡ ಮುಡಿಗೇರಿಸಿಕೊಂಡಿದೆ. ಹೌದು. ಶ್ರೀಲಂಕಾದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ಪಂದ್ಯ ಬಹಳ ರೋಚಕವಾಗಿದ್ದು, ಏಷ್ಯಾ ಕಪ್ ಪ್ರಶಸ್ತಿ ಗೆದ್ದು ಭಾರತ ಬೀಗಿದೆ. 50 ರನ್ ಗೆ ಶ್ರೀಲಂಕಾ ಆಲೌಟ್ ಆಗಿದ್ದು, ಈ ಮೂಲಕ 23 ವರ್ಷದ ಹಳೇ ಸೇಡನ್ನು ಟೀಂ ಇಂಡಿಯಾ ತೀರಿಸಿಕೊಂಡಿದೆ.
ಹೌದು. 23 ವರ್ಷಗಳ ಹಿಂದೆ ಭಾರತ ತಂಡವನ್ನು ಶ್ರೀಲಂಕಾ 54 ರನ್ ಗೆ ಆಲೌಟ್ ಮಾಡಿತ್ತು. ಇದೀಗ ಭಾರತ 50 ರನ್ ಗೆ ಆಲೌಟ್ ಮಾಡುವ ಮೂಲಕ ಶ್ರೀಲಂಕಾ ವಿರುದ್ಧ ಸೇಡು ತೀರಿಸಿಕೊಂಡಿದೆ.
ಶ್ರೀಲಂಕಾ ತಂಡವು 15.2 ಓವರ್ಗೆ 50 ರನ್ಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 51 ರನ್ಗಳ ಕಡಿಮೆ ಮೊತ್ತದ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಭಾರತ ತಂಡ ಕೇವಲ 6.1 ಓವರ್ಗೆ 51 ರನ್ ಗಳಿಸುವ ಮೂಲ 10 ವಿಕೆಟ್ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ 8ನೇ ಬಾರಿಗೆ ಏಷ್ಯಾ ಕಪ್ ಪ್ರಶಸ್ತಿ ಗೆದ್ದಿದೆ.
ಭಾರತ ಕೇವಲ 6.1 ಓವರ್ಗಳಲ್ಲಿ 263 ಎಸೆತಗಳು ಬಾಕಿ ಇರುವಾಗಲೇ 10 ವಿಕೆಟ್ ಗಳನ್ನು ಕಳೆದುಕೊಂಡು ಜಯ ಸಾಧಿಸಿತು. ಇದು ಉಳಿದಿರುವ ಎಸೆತಗಳ ವಿಷಯದಲ್ಲಿ ಭಾರತದ ಅತಿದೊಡ್ಡ ಗೆಲುವಿನ ಅಂತರವಾಗಿದೆ. ಇದಕ್ಕೂ ಮುನ್ನ 2001ರಲ್ಲಿ ಕೀನ್ಯಾ ವಿರುದ್ಧ 231 ಎಸೆತಗಳು ಬಾಕಿ ಇರುವಾಗಲೇ 91 ರನ್ ಗಳ ಗುರಿ ಬೆನ್ನಟ್ಟಿತ್ತು.
ಟಾಸ್ ಸಮಯದಲ್ಲಿ ಮಳೆಯ ಸುಳಿವಿರಲಿಲ್ಲ ಆದರೆ ತುಂತುರು ಮಳೆಯಿಂದಾಗಿ ಆಟದ ಪ್ರಾರಂಭವು 40 ನಿಮಿಷ ವಿಳಂಬವಾಯಿತು. ಜಸ್ಪ್ರೀತ್ ಬುಮ್ರಾ ಮೊದಲ ಓವರ್ನಲ್ಲಿ ಕುಸಾಲ್ ಪೆರೆರಾ ಅವರನ್ನು ಔಟ್ ಮಾಡಿದಾಗ ಮೊದಲು ಸ್ಟ್ರೈಕ್ ಮಾಡಿದರು, ಮೊಹಮ್ಮದ್ ಸಿರಾಜ್ ಉಪಖಂಡದಲ್ಲಿ ವೇಗದ ಬೌಲಿಂಗ್ ಶ್ರೇಷ್ಠ ಪ್ರದರ್ಶನಗಳಲ್ಲಿ ಒಂದನ್ನು ನಿರ್ಮಿಸಿದರು.