ಮಂಡ್ಯ: ಪತ್ನಿಯ ಆಸ್ತಿ ಆಸೆಗಾಗಿ ಪ್ರಾಧ್ಯಾಪಕ ಮಹಾಶಯನೊಬ್ಬ ಹೆಂಡತಿಯ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ವಿವಿ ನಗರ ಬಡಾವಣೆಯಲ್ಲಿ ನಡೆದಿದೆ.
ಮಂಡ್ಯ ಖಾಸಗಿ ಕಾಲೇಜಿನ ಪ್ರಾಧ್ಯಾಪಕ ಟಿ.ಎನ್.ಸೋಮಶೇಖರ್ ಪತ್ನಿಯನ್ನೇ ಕೊಲೆಗೈದ ಆರೋಪಿ. ಎಸ್.ಶೃತಿ (32) ಕೊಲೆಯಾದ ಮಹಿಳೆ. ಪತ್ನಿ ನಿದ್ರೆಗೆ ಜಾರಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದು, ಬಳಿಕ ಸಹಜ ಸಾವೆಂದು ನಾಟಕವಾಡಿದ್ದಾನೆ.
ಶೃತಿಯವರಿಗೆ ಕೆಲ ವರ್ಷಗಳ ಹಿಂದೆ ತಂದೆ-ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಬಳಿಕ ಸಹೋದರಿ ಕೂಡ 2018ರಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಶೃತಿ ಹೆಸರಿಗೆ 10 ಕೋಟಿಗೂ ಅಧಿಕ ಆಸ್ತಿ ವರ್ಗಾವಣೆಯಾಗಿತ್ತು. ಮೈಸೂರಿನ ಪ್ರಮುಖ ನಗರದಲ್ಲಿ ಕಮರ್ಷಿಯಲ್ ಬಿಲ್ಡಿಂಗ್, ಮನೆ, ಸೈಟ್ ಗಳು ಇದ್ದವು. ಇವುಗಳ ಮೇಲೆ ಕಣ್ಣಿಟ್ಟಿದ್ದ ಶೃತಿ ಪತಿ ಸೋಮಶೇಖರ್, ಆ ಎಲ್ಲಾ ಆಸ್ತಿಗಳನ್ನು ಮಾರಾಟ ಮಾಡು ಬಂದ ಹಣದಿಂದ ಬೇರೆ ಆಸ್ತಿ ಖರೀದಿ ಮಾಡೋಣ ಎಂದು ಒತ್ತಾಯಿಸುತ್ತಿದ್ದ. ಆಸ್ತಿ ಮಾರಲು ಶೃತಿ ನಿರಾಕರಿಸಿದ್ದಳು. ಇದೇ ವಿಚರವಾಗಿ ಗಂಡ-ಹೆಂಡತಿ ನಡುವೆ ಆಗಾಗ ಜಗಳವಾಗುತ್ತಿತ್ತು.
ಆಸ್ತಿ ಆಸೆಗಾಗಿ ಶೃತಿ ಅವರನ್ನು ರಾತ್ರಿ ಮಲಗಿದ್ದ ವೇಳೆ ತಲೆದಿಂಬು, ಬೆಡ್ ಶೀಟ್ ನಿಂದ ಉಸಿರುಗಟ್ಟಿಸಿ ಕೊಲೆಗೈದು ಬಳಿಕ ಬಿಪಿ ಲೋ ಆಗಿ ಸಹಜವಾಗಿ ಸಾವನ್ನಪ್ಪಿದ್ದಾಳೆ ಎಂದು ಶೃತಿ ಚಿಕ್ಕಪ್ಪನಿಗೆ ಕರೆ ಮಾಡಿ ತಿಳಿಸಿದ್ದ. ಅನುಮಾನಗೊಂಡ ಚಿಕ್ಕಪ್ಪ ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮರಣೋತ್ತರ ಪರೀಕ್ಷೆಯಲ್ಲಿಯೂ ಉಸಿರುಗಟ್ಟಿಸಿ ಸಾವು ಎಂದು ಸಾಬೀತಾಗಿತ್ತು. ಪ್ರಕರಣ ದಾಖಲಿಸಿಕೊಂದ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.