ಶಾಲಾ ಮಾರ್ಕ್ಸ್ ಕಾರ್ಡ್ನಲ್ಲಿ ಶಿಕ್ಷಕಿಯೊಬ್ಬರು ಬರೆದಿರುವ ಬರವಣಿಗೆ ಸಕತ್ ವೈರಲ್ ಆಗಿದ್ದು, ನೆಟ್ಟಿಗರು ಬಿದ್ದೂ ಬಿದ್ದೂ ನಗುವಂತಾಗಿದೆ.
2019 ರ ಅವಧಿಯ ಮೂರನೇ ಪತ್ರಿಕೆಯ ಫಲಿತಾಂಶದಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿ ಪಾಸ್ ಆಗಿದ್ದಾಳೆ ಎಂದು ಬರೆಯುವ ಬದಲು ಇಂಗ್ಲಿಷ್ನಲ್ಲಿ ಬರೆದಿದ್ದು ಅದು ಅಪಾರ್ಥ ಕಲ್ಪಿಸುವಂತಿದೆ. ಅದರ ಸ್ಕ್ರೀನ್‌ಶಾಟ್ ಸಕತ್ ವೈರಲ್ ಆಗುತ್ತಿದೆ.
ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಪಾಸ್ ಆಗಿದ್ದಾಳೆ ಎಂದು ಹೇಳುವ ಬದಲು ಇಂಗ್ಲಿಷ್ನಲ್ಲಿ ಪಾಸ್ಡ್ ಅವೆ (she has passed away) ಎಂದು ಬರೆದಿದ್ದಾರೆ. ಇದರ ಅರ್ಥ ನಿಧನ ಹೊಂದಿದ್ದಾಳೆ ಎಂದಾಗುತ್ತದೆ. ಇದನ್ನು @ಅನಂತ್ ಭಾನ್ ಟ್ವಿಟರ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ.
ಶಿಕ್ಷಕಿಯಾದವರಿಗೆ ಇಷ್ಟೂ ಇಂಗ್ಲಿಷ್ ಬರುವುದಿಲ್ಲವೆಂದರೆ ಮಕ್ಕಳಿಗೆ ಏನು ಕಲಿಸುತ್ತಾರೆ ಎಂದು ಹಲವರು ಕಮೆಂಟ್ ಮಾಡಿದ್ದಾಳೆ.