
ಪಾಣಿಪತ್: 17 ವರ್ಷದ ವಿದ್ಯಾರ್ಥಿಯೊಂದಿಗೆ ಶಿಕ್ಷಕಿ ಓಡಿಹೋಗಿದ್ದಾಳೆ. ಇದರಿಂದ ಕಂಗಾಲಾದ ವಿದ್ಯಾರ್ಥಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಹರ್ಯಾಣದ ಪಾಣಿಪತ್ ನಲ್ಲಿ ಘಟನೆ ನಡೆದಿದೆ. ಪಾಣಿಪತ್‌ನ ದೇಶರಾಜ್ ಕಾಲೋನಿಯಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಶಿಕ್ಷಕಿಯಾಗಿರುವ ಮಹಿಳೆ ಮದುವೆಯಾಗಿ ವಿಚ್ಚೇದನ ಪಡೆದುಕೊಂಡಿದ್ದು, ತಾಯಿ ಮನೆಯಲ್ಲಿ ವಾಸವಾಗಿದ್ದಾಳೆ.
ಆಕೆ ಕಳೆದ ಎರಡು ವರ್ಷಗಳಿಂದ ಹುಡುಗನಿಗೆ ಟ್ಯೂಷನ್ ಹೇಳಿಕೊಡುತ್ತಿದ್ದಳು. 17 ವರ್ಷದ ಬಾಲಕ 11 ನೇ ತರಗತಿ ಓದುತ್ತಿದ್ದಾನೆ. ಲಾಕ್ಡೌನ್ ಜಾರಿಯಲ್ಲಿದ್ದ ಕಾರಣ 2 ಗಂಟೆ ಟ್ಯೂಷನ್ ಹೇಳಿಕೊಡುತ್ತಿದ್ದ ಶಿಕ್ಷಕಿ ನಂತರದಲ್ಲಿ ದಿನ 4 ಪಾಠ ಮಾಡತೊಡಗಿದ್ದಾಳೆ. ಈ ನಡುವೆ ಟೀಚರ್ ಮತ್ತು ವಿದ್ಯಾರ್ಥಿ ನಡುವೆ ಪ್ರೀತಿ ಚಿಗುರಿದ್ದು, ಮೇ 29 ರಂದು ಇಬ್ಬರು ಪರಾರಿಯಾಗಿದ್ದಾರೆ.
ಟೀಚರ್ ಮನೆಯಲ್ಲಿ ವಿಚಾರಿಸಿದ ವಿದ್ಯಾರ್ಥಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಶಿಕ್ಷಕಿ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗಿದೆ. ಇಬ್ಬರೂ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಇಬ್ಬರೂ ಮನೆಯಿಂದ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗಿಲ್ಲ. ಬೆಲೆಬಾಳುವ ವಸ್ತುಗಳ ಪೈಕಿ ಶಿಕ್ಷಕಿ ಕೈಯಲ್ಲಿ ಕೇವಲ ಒಂದು ಚಿನ್ನದ ಉಂಗುರವಿದೆ. ಪೊಲೀಸರು ಹುಡುಕಾಟ ನಡೆಸಿದ್ದಾರೆ.