ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಅನುಕೂಲವಾಗುವಂತೆ ಸರ್ಕಾರ ವರ್ಗಾವಣೆ ಕಾಯ್ದೆಯನ್ನು ಎರಡು ಬಾರಿ ತಿದ್ದುಪಡಿ ಮಾಡಿದ್ದರೂ, ಹೆಚ್ಚಿನ ಶಿಕ್ಷಕರಿಗೆ ಅನುಕೂಲವಾಗಿಲ್ಲ ಎನ್ನಲಾಗಿದೆ.
ಶೇಕಡ 25 ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇರುವ 53 ತಾಲೂಕುಗಳನ್ನು ವರ್ಗಾವಣೆ ವ್ಯಾಪ್ತಿಯಿಂದ ಹೊರಗೆ ಇಟ್ಟಿರುವುದರಿಂದ ರಾಜ್ಯದ ಸುಮಾರು 50,000 ಶಿಕ್ಷಕರಿಗೆ ವರ್ಗಾವಣೆಯ ಅವಕಾಶ ಇಲ್ಲವಾಗಿದೆ ಎಂದು ಹೇಳಲಾಗಿದೆ.
ಪತಿ-ಪತ್ನಿಯರಿಗೆ ಕೂಡ ನಿರಾಸೆಯಾಗಿದೆ. ಪತಿ, ಪತ್ನಿ ವರ್ಗಾವಣೆ ಪ್ರಕರಣದಲ್ಲಿ ತಾಲೂಕಿನ ಒಳಗೆ ನಿಗದಿತ ವಿಷಯದ ಶಿಕ್ಷಕರ ಹುದ್ದೆ ಖಾಲಿ ಇಲ್ಲ ಎಂಬ ಕಾರಣಕ್ಕೆ ನೂರಾರು ಶಿಕ್ಷಕರ ವರ್ಗಾವಣೆ ಅವಕಾಶದಿಂದ ವಂಚಿತರಾಗಿದ್ದಾರೆ.
ಶಿಕ್ಷಕರ ಹುದ್ದೆ ಕೊರತೆಯಾಗಬಾರದು ಎಂಬ ಕಾರಣಕ್ಕೆ ಶೇಕಡ 25ರಷ್ಟು ಶಿಕ್ಷಕರ ಹುದ್ದೆ ಖಾಲಿ ಇರುವ 53 ತಾಲ್ಲೂಕುಗಳನ್ನು ವರ್ಗಾವಣೆಯಿಂದ ಪ್ರಕ್ರಿಯೆಯಿಂದ ಹೊರಗಿಡಲಾಗಿದ್ದು, ಇಂತಹ ತಾಲೂಕುಗಳಲ್ಲಿ ಕೆಲಸ ಮಾಡುತ್ತಿರುವ 50 ಸಾವಿರಕ್ಕೂ ಅಧಿಕ ಶಿಕ್ಷಕರ ವರ್ಗಾವಣೆಗೆ ಅವಕಾಶ ಸಿಕ್ಕಿಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಇದರಿಂದಾಗಿ ಗೊಂದಲ ಮುಂದುವರೆದಿದೆ ಎನ್ನಲಾಗಿದೆ.