ಬೆಂಗಳೂರು: ಸರ್ಕಾರದಿಂದ ವರ್ಗಾವಣೆ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ವರ್ಗಾವಣೆ ನಿಯಮ ಸಡಿಲಿಕೆ ಮಾಡಲಾಗಿದೆ.
ತಾಲ್ಲೂಕುವಾರು ಶಿಕ್ಷಕರ ಸಂಖ್ಯೆಯನ್ನು ಆಧರಿಸಿ ಟ್ರಾನ್ಸ್ಫರ್ ಮಾಡಿದರೆ ಬಹಳಷ್ಟು ಶಿಕ್ಷಕರಿಗೆ ವರ್ಗಾವಣೆಗೆ ಅವಕಾಶ ಸಿಗದಿರುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಶಿಕ್ಷಕರ ವರ್ಗಾವಣೆ ನಿಯಮ ಸಡಿಲಿಕೆ ಮಾಡಲಾಗಿದೆ ಎನ್ನಲಾಗಿದೆ.
ಶಿಕ್ಷಣ ಇಲಾಖೆಯಿಂದ ಈ ಕುರಿತಂತೆ ಆದೇಶ ಹೊರಡಿಸಿ, ಯಾವುದೇ ಘಟಕದಲ್ಲಿ ಮಂಜೂರಾದ ಹುದ್ದೆಗಳ ಆಧಾರದ ಮೇಲೆ ಶೇಕಡವಾರು ಮಿತಿ ಲೆಕ್ಕಚಾರ ಮಾಡಿ ವರ್ಗಾವಣೆ ಪ್ರಕ್ರಿಯೆ ಮುಂದುವರಿಸಬಹುದೆಂದು ಹೇಳಲಾಗಿದೆ. ನಿಯಮ ಸಡಿಲಿಕೆಯಿಂದ ಶಿಕ್ಷಕರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ. ವರ್ಗಾವಣೆ ನಿಯಮ ಸಡಿಲಿಕೆ ಮಾಡಿದ ಸರ್ಕಾರದ ಕ್ರಮಕ್ಕೆ ಸರ್ಕಾರಿ ನೌಕರರ ಸಂಘದಿಂದ ಕೃತಜ್ಞತೆ ಸಲ್ಲಿಸಲಾಗಿದೆ.