
ಬೆಂಗಳೂರು: ಜನವರಿ 14 ರಿಂದ ಆರಂಭವಾಗಬೇಕಿದ್ದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಗಣಕೀಕೃತ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಜನವರಿ 25 ಕ್ಕೆ ಮುಂದೂಡಲಾಗಿದೆ
ನ್ಯಾಯಾಲಯದ ತೀರ್ಪಿನ ಅನ್ವಯ ಈಗಾಗಲೇ ಕೈಗೊಂಡಿರುವ ಮೈಸೂರು ವಿಭಾಗದ ಪ್ರೌಢಶಾಲೆ ಶಿಕ್ಷಕರು ಮತ್ತು ಮುಖ್ಯಶಿಕ್ಷಕರು ಹಿಂದಿನ ಅರ್ಜಿಗಳ ಕೋರಿಕೆ, ಪರಸ್ಪರ ವರ್ಗಾವಣೆ, ಸಂಬಂಧಿತ ಜಿಲ್ಲಾ, ವಿಭಾಗೀಯ ಮತ್ತು ಅಂತರ ವಿಭಾಗೀಯ ಕೌನ್ಸೆಲಿಂಗ್ ಜನವರಿ 14 ರಿಂದ 25 ರವರೆಗೆ ನಡೆಯಲಿದೆ.
ಪ್ರಾಥಮಿಕ ಶಾಲೆ ಶಿಕ್ಷಕರ 2020 -21 ನೇ ಸಾಲಿನ ಅಂತರ ಘಟಕ ವಿಭಾಗದ ಹೊರಗಿನ ಗಣಕೀಕೃತ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಜನವರಿ 25 ಕ್ಕೆ ಮುಂದೂಡಲಾಗಿದೆ.
ಫೆಬ್ರವರಿ 4 ರಿಂದ ಮೈಸೂರು ವಿಭಾಗ ಸೇರಿದಂತೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಶಿಕ್ಷಕರು, ಮುಖ್ಯ ಶಿಕ್ಷಕರ ಜಿಲ್ಲೆ, ವಿಭಾಗೀಯ, ಅಂತರ ವಿಭಾಗದ ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಗಳು ನಡೆಯಲಿವೆ ಎಂದು ಹೇಳಲಾಗಿದೆ.