ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸಿಹಿ ಸುದ್ದಿ ನೀಡಲಾಗಿದೆ. ನಾಳೆಯಿಂದ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ.
2022ರ ಫೆಬ್ರವರಿ 26 ರವರೆಗೂ ವರ್ಗಾವಣೆ ಪ್ರಕ್ರಿಯೆ ನಡೆಯಲಿದ್ದು, ಈಗಾಗಲೇ ಅರ್ಜಿ ಸಲ್ಲಿಸಿದ 72,000 ಶಿಕ್ಷಕರಿಗೆ ವರ್ಗಾವಣೆ ಭಾಗ್ಯ ಸಿಗಲಿದೆ. ವರ್ಗಾವಣೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. ಕಡ್ಡಾಯ ವರ್ಗಾವಣೆ ಆಗಿದ್ದವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಮೊದಲ ಹಂತದ ಕೌನ್ಸೆಲಿಂಗ್ ನವೆಂಬರ್ 2 ರಂದು ನಡೆಯಲಿದೆ. ಎರಡನೇ ಹಂತದ ಕೌನ್ಸೆಲಿಂಗ್ 2021ರ ಜನವರಿ 18 ರಂದು ನಡೆಯಲಿದೆ.
ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆ ಒಂದನೇ ಹಂತದ ಕೌನ್ಸೆಲಿಂಗ್ ನವೆಂಬರ್ 24 ರಿಂದ ಡಿಸೆಂಬರ್ 2 ರ ವರೆಗೆ ನಡೆಯಲಿದೆ. ಎರಡನೇ ಹಂತದ ಕೌನ್ಸೆಲಿಂಗ್ ಜನವರಿ 19 ರಿಂದ 27ರ ವರೆಗೆ ನಡೆಯಲಿದೆ.
ಜಿಲ್ಲೆಯೊಳಗಿನ ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್ ಮೊದಲ ಹಂತದಲ್ಲಿ ನವೆಂಬರ್ 19 ರಿಂದ ಹಾಗೂ ಎರಡನೇ ಹಂತದ ಕೌನ್ಸೆಲಿಂಗ್ ಜನವರಿ 19 ರಿಂದ ಆರಂಭವಾಗಲಿದೆ.
ಘಟಕದ ಹೊರಗೆ ಮತ್ತು ವಲಯದೊಳಗಿನ ಕೋರಿಕೆ ವರ್ಗಾವಣೆಗೆ ನವೆಂಬರ್ 16 ರಿಂದ ಮೊದಲ ಹಂತದ ಕೌನ್ಸೆಲಿಂಗ್ ನಡೆಯಲಿದ್ದು, ಫೆಬ್ರವರಿ 1 ರಿಂದ ಎರಡನೇ ಹಂತದ ಕೌನ್ಸೆಲಿಂಗ್ ನಡೆಯಲಿದೆ ಎಂದು ಹೇಳಲಾಗಿದೆ.